ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 6 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
ಠಾಣೆಯಿಂದ ವಾಪಸಾಗಿದ್ದ ಕುಮಟಾದ 62 ವರ್ಷದ ವೃದ್ಧ, ಮುಂಬೈನಿಂದ ಆಗಮಿಸಿದ್ದ ಹೊನ್ನಾವರದ 10 ವರ್ಷದ ಬಾಲಕ, 35, 61, 65 ವರ್ಷದ ಮಹಿಳೆಯರಲ್ಲಿ ಹಾಗೂ ಫಿಲಿಪ್ಪಿನ್ಸ್ ನಿಂದ ವಾಪಸಾಗಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದ ಹಳಿಯಾಳದ 34 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ಈ ಮೂಲಕ ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 114 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 93 ಮಂದಿ ಗುಣಮುಖರಾಗಿದ್ದಾರೆ. ಇನ್ನು 21 ಜನರಿಗೆ ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.