ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 51 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 67 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 5, ಅಂಕೋಲಾ 2, ಕುಮಟಾ 14, ಯಲ್ಲಾಪುರದಲ್ಲಿ 2, ಹೊನ್ನಾವರ 1, ಭಟ್ಕಳ 3, ಶಿರಸಿ 2, ಮುಂಡಗೋಡ 5, ಹಳಿಯಾಳ 13, ಜೊಯಿಡಾದಲ್ಲಿ 4 ಮಂದಿಗೆ ಸೋಂಕು ದೃಢಪಟ್ಟಿದೆ.
ಕಾರವಾರದಲ್ಲಿ 17, ಕುಮಟಾ 4, ಹೊನ್ನಾವರ 11, ಭಟ್ಕಳ 15, ಶಿರಸಿ 5, ಯಲ್ಲಾಪುರ 2, ಹಳಿಯಾಳ 13 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಾರವಾರದಲ್ಲಿ ಒಂದು ಸಾವು ಸಂಭವಿಸಿದೆ.