ಕಾರವಾರ: ಖಾಸಗಿ ಬಸ್ನಲ್ಲಿ 50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಲ್ಲಾಪುರದ ಜೋಡುಕೆರೆ ಬಳಿ ನಡೆದಿದೆ.
ಗುಜರಾತ್ ಮೂಲದ ದಿನೇಶ ಠಾಕೂರ (34), ಪಂಕಜಕುಮಾರ ಪಟೇಲ್ (40), ಗೋವಿಂದ ಪಟೇಲ್ (50), ಮುಖೇಶ ಪಟೇಲ್ (55), ಉಪೇಂದ್ರ ಪಟೇಲ್ (47) ಬಂಧಿತ ಆರೋಪಿಗಳು.
ಬೆಳಗಾವಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 51 ಎಎಫ್ 9490 ನಂಬರ್ನ ಗಣೇಶ ಟ್ರಾವೆಲ್ಸ್ ಬಸ್ನಲ್ಲಿ ಹವಾಲಾ ಹಣ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.