ETV Bharat / state

ರೈತರ ಭೂಮಿಗೆ 50 ಲಕ್ಷ ರೂ ಪರಿಹಾರಕ್ಕೆ ನಿರ್ಧಾರ: ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆಯಲ್ಲಿ ಜನ

author img

By

Published : Nov 20, 2022, 4:57 PM IST

Updated : Nov 20, 2022, 5:12 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ 1997ರಲ್ಲಿಯೇ ರೈತರ ಜಮೀನನ್ನು ಕೈಗಾರಿಕೆ ಸ್ಥಾಪನೆಗಾಗಿ ಒತ್ತುವರಿ ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅಂತಿಮ ಹಂತದ ಮಾತುಕತೆಯನ್ನು ನಡೆಸಿ ರೈತರಿಗೆ ಎಕರೆಗೆ 50 ಲಕ್ಷ ಪರಿಹಾರ ಕೊಡಲು ಸಮ್ಮತಿಸಿದೆ.

District Collector Prabhulinga Kavalikatti
ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ

ಕಾರವಾರ: ರಾಜ್ಯದ ಗಡಿ ಜಿಲ್ಲೆ ಕಾರವಾರದಲ್ಲಿ ಕೈಗಾರಿಕೆಗಳಿಲ್ಲದೆ ಉದ್ಯೋಗ ಅರಸಿ ಯುವಕರು ಗೋವಾದತ್ತ ಪಯಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಗಾರಿಕೆಗಳ ಸ್ಥಾಪನೆ ಮಾಡುವಂತೆ ಹಿಂದಿನಿಂದಲೂ ಸರ್ಕಾರದ ಮೇಲೆ ಜನರು ಒತ್ತಡ ಹಾಕುತ್ತ ಬಂದಿದ್ದರು. ಇದೀಗ ಸರ್ಕಾರ ಗಡಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದೆ.

ಕೈಗಾರಿಕೆಗಾಗಿ ಸ್ಥಾಪನೆಗಾಗಿ ಒತ್ತುವರಿ ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಿದೆ. ಕೈಗಾರಿಕೆ ಅಭಿವೃದ್ಧಿ ಮಂಡಳಿ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು 1997ರಲ್ಲಿಯೇ ರೈತರ ಜಮೀನನ್ನು ವಶಕ್ಕೆ ಪಡೆದಿತ್ತು. ಆದರೆ ಸೂಕ್ತ ಪರಿಹಾರ ಕೊಡದ ಕಾರಣ ಇನ್ನೂ ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಆಗಿರಲಿಲ್ಲ.

ಸದ್ಯ ಕೈಗಾರಿಕೆ ಪ್ರಾರಂಭಕ್ಕೆ ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ ಸರ್ವೇ ನಡೆಸಿ ಭೂಮಿಗೆ ಸೂಕ್ತ ಪರಿಹಾರ ಕೊಡುವ ಸಂಬಂಧ ಚರ್ಚೆ ನಡೆಸಿದೆ. ರೈತರ ಬೇಡಿಕೆಯಂತೆ ಎಕರೆ ಜಮೀನಿಗೆ 50 ಲಕ್ಷ ಪರಿಹಾರ ಕೊಡಲು ಸಭೆಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಸುಮಾರು 73 ಎಕರೆ ಪ್ರದೇಶದಲ್ಲಿ ನೌಕಾನೆಲೆಗೆ ಸಂಬಂಧಿಸಿದ ಕೈಗಾರಿಕೆಗಳು ಈ ಪ್ರದೇಶದಲ್ಲಿ ಪ್ರಾರಂಭವಾಗಲಿದೆ.

ರೈತರಿಗೆ ಎಕರೆಗೆ 50 ಲಕ್ಷ ಪರಿಹಾರ ಕೊಡಲು ಸಮ್ಮತಿ

20 ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರೈತರಿಂದ ಜಮೀನು ಪಡೆಯುವಾಗ ಗುಂಟೆಗೆ 8833 ರೂಪಾಯಿ ಹಣ ಕೊಡುವುದಾಗಿ ಹೇಳಿದ್ದು, ಆದರೆ ಇದಕ್ಕೆ ರೈತರು ಒಪ್ಪಿಗೆ ನೀಡಿರಲಿಲ್ಲ. ಇದೀಗ ಜಿಲ್ಲಾಡಳಿತದೊಂದಿಗೆ ಅಂತಿಮ ಹಂತದ ಮಾತುಕತೆಯನ್ನು ನಡೆಸಿ ರೈತರಿಗೆ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಲು ಸಮ್ಮತಿ ನೀಡಿದೆ.

1997 ರಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ ಮಾಡಲು ಕೆಐಡಿಬಿ ವತಿಯಿಂದ ಭೂ ಒತ್ತುವರಿಯನ್ನು ಮಾಡಿದ್ದರು. ಒತ್ತುವರಿ ಮಾಡಿದ ಪ್ರದೇಶದಲ್ಲಿ ಎರಡು ಹಂತಗಳನ್ನು ಮಾಡಿಕೊಂಡು ಇಂದು 73 ಎಕರೆಗೆ ದರ ನಿಗದಿ ಸಭೆಯನ್ನು ನಡೆಸಲಾಗಿದೆ.

ಜನರ ಅಪೇಕ್ಷೆಯಂತೆ ಎಕರೆಗೆ 50 ಲಕ್ಷ ದರ ನಿಗದಿಗೆ ತೀರ್ಮಾನಿಸಲಾಗಿದ್ದು, ಕೆಐಡಿಬಿ ಮಂಡಳಿಯು ಅನುಮೋದನೆ ನೀಡಿದ ನಂತರ ಹಣ ಬಿಡುಗಡೆಯಾಗುತ್ತದೆ. 15 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ತಿಳಿಸಿದರು.

ಇದನ್ನೂ ಓದಿ:ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಲೋಕಾರ್ಪಣೆ: ಸಚಿವ ಗೋಪಾಲಯ್ಯ

Last Updated : Nov 20, 2022, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.