ಶಿರಸಿ: ಕಳೆದ ವಾರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ನಾಲ್ವರು ಕೊರೊನಾ ಶಂಕಿತರ ಲ್ಯಾಬ್ ವರದಿ ನೆಗೆಟಿವ್ ಬಂದಿದೆ. ಇನ್ನೂ 9 ಜನರ ಲ್ಯಾಬ್ ವರದಿ ಬರಬೇಕಿದೆ. ಒಟ್ಟು 40 ವರದಿಗಳಲ್ಲಿ 31 ವರದಿಗಳು ನೆಗೆಟಿವ್ ಬಂದಿವೆ.
ಕೊರೊನಾ ವೈರಸ್ ಭೀತಿ ಆರಂಭವಾದ ಬಳಿಕ ಇಲ್ಲಿಯವರೆಗೆ ತಾಲೂಕಿನ ಸುಮಾರು 40 ಜನರ ಕಫ, ರಕ್ತದ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ಕಳಿಸಲಾಗಿದೆ. ಅದರಲ್ಲಿ ಇಲ್ಲಿಯವರೆಗೆ ಸುಮಾರು 31 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 9 ಜನರ ವರದಿಗಳು ಬರಬೇಕಿದೆ.
ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ರೈಲಿನ ಮೂಲಕ ನಗರಕ್ಕೆ ಬಂದಿದ್ದ ಇಬ್ಬರು ಹಾಗೂ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿರುವ ಯಲ್ಲಾಪುರದ ಕೊರೊನಾ ಶಂಕಿತರ ಸಂಪರ್ಕದಲ್ಲಿದ್ದವರ ವರದಿಗಳೂ ಸಹ ನೆಗೆಟಿವ್ ಬಂದಿವೆ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಓರ್ವ ವ್ಯಕ್ತಿ ದಾಖಲಾಗಿದ್ದು, 2 ಜನರ ರಕ್ತದ ಮಾದರಿ ಲ್ಯಾಬ್ಗೆ ಕಳುಹಿಸಲಾಗಿದೆ.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿ, ಸುಮಾರು 22 ಜನರ ರಕ್ತದ ಮಾದರಿಯನ್ನು ಲ್ಯಾಬ್ಗೆ ನೀಡಿದ್ದು, ಎಲ್ಲವೂ ನೆಗೆಟಿವ್ ಬಂದಿವೆ.