ಕಾರವಾರ: ಎರಡು ವರ್ಷದ ಮಗುವೊಂದು ಸೊಳ್ಳೆ ನಾಶಕ ಲಿಕ್ವಿಡ್ ಕುಡಿದು ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲೂಕಿನ ಕಾವೂರು ಗ್ರಾಮದಲ್ಲಿ ನಡೆದಿದೆ.
ಆರವ್ ಮಹೇಶ ನಾಯ್ಕ (2) ಮೃತ ದುರ್ದೈವಿ ಮಗು. ಮನೆಯ ನೆಲದ ಮೇಲೆ ಇಟ್ಟಿದ್ದ ಸೊಳ್ಳೆ ನಿವಾರಕ ಲಿಕ್ವಿಡ್ ಕುಡಿದ ಮಗು ತೀವ್ರ ಅಸ್ವಸ್ಥಗೊಂಡಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೆರೆಗೆ ಬಿದ್ದು ಪ್ರೇಮಿಗಳಿಬ್ಬರ ಆತ್ಮಹತ್ಯೆ.. ಕಾರಣ ನಿಗೂಢ