ETV Bharat / state

ಭಟ್ಕಳ: 1995ರ ಕಳ್ಳತನ ಪ್ರಕರಣ ಆರೋಪಿ 25 ವರ್ಷಗಳ ಬಳಿಕ ಬಂಧನ - Bhatkal crime news

1995ರ ಕಳ್ಳತನ ಪ್ರಕರಣ ಸಂಬಂಧ 25 ವರ್ಷಗಳ ಬಳಿಕ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Mohamed Meera Cola
ಮಹ್ಮದ್​ ಮೀರಾ ಕೋಲಾ
author img

By

Published : Mar 11, 2021, 11:59 AM IST

ಭಟ್ಕಳ: ಸಂಬಂಧಿಕನೋರ್ವನ ಬೈಕನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ಇಟ್ಟುಕೊಂಡಿರುವ ಬಗ್ಗೆ 1995ನೇ ಇಸವಿಯಲ್ಲಿ ದಾಖಲಾದ ಪ್ರಕರಣದ ಆರೋಪಿಯನ್ನು 25 ವರ್ಷಗಳ ಬಳಿಕ ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.

ಮದಿನಾ ಕಾಲನಿ ನಿವಾಸಿ ಮಹ್ಮದ್​ ಮೀರಾ ಕೋಲಾ ಬಂಧಿತ ಆರೋಪಿ. ಈತ 1995ರಲ್ಲಿ ಸಂಬಂಧಿಕನೋರ್ವನ ಬೈಕನ್ನು ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿದ್ದ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಒಮ್ಮೆ ಠಾಣೆಗೆ ಬಂದ ವ್ಯಕ್ತಿ ನಂತರ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಕೋವಿಡ್ ವೇಳೆ ಭಟ್ಕಳಕ್ಕೆ ಬಂದ ಈತನ ಮಾಹಿತಿ ಪಡೆದ ಭಟ್ಕಳ ಸಿಪಿಐ ದಿವಾಕರ ನೇತೃತ್ವದ ತಂಡ ಈತನನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.