ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ 14 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಗೋವಾದಲ್ಲಿನ ವಾಸ್ಕೊದ ಉಪಾಸ ನಗರದಲ್ಲಿ ನಡೆದಿದೆ.
ನಗರದ ನಂದನಗದ್ದಾ ಪಟೇಲವಾಡ ಮೂಲದ ಬಾಲಕ ಆದಿತ್ಯ ವಿಕಾಶ ನಾಯ್ಕ ಮೃತಪಟ್ಟ ವಿದ್ಯಾರ್ಥಿ. ಈತ ತಂದೆ-ತಾಯಿಯೊಂದಿಗೆ ಗೋವಾದ ಉಪಾಸ ನಗರದಲ್ಲಿ ವಾಸವಾಗಿದ್ದ. ಅಲ್ಲದೇ ವಾಸ್ಕೊ ಸಮೀಪದ ಶಾಲೆಯೊಂದರಲ್ಲಿ ಒಂಭತ್ತನೇ ತರಗತಲ್ಲಿ ಓದುತ್ತಿದ್ದ. ಆದರೆ ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆಯಾಗಿದೆ.
ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ದೂರು ನೀಡಿದ್ದಾರೆ. ಅದರಂತೆ ಇಂದು ಮೃತದೇಹವನ್ನು ನಂದನಗದ್ದಾಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಸದ್ಯ ಈ ಬಗ್ಗೆ ವಾಸ್ಕೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.