ETV Bharat / state

ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ: ಭಟ್ಕಳ ನಗರ ಸಂಪೂರ್ಣ ಸೀಲ್​ ಡೌನ್​​

ಭಟ್ಕಳದಲ್ಲಿ ಶುಕ್ರವಾರ ಒಂದೇ ದಿನ 12 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಸೀಲ್ ​ಡೌನ್​ ಮಾಡಲಾಗಿದೆ.

ಭಟ್ಕಳ ನಗರ ಸಂಪೂರ್ಣ ಸೀಲ್​ಡೌನ್
ಭಟ್ಕಳ ನಗರ ಸಂಪೂರ್ಣ ಸೀಲ್​ಡೌನ್
author img

By

Published : May 8, 2020, 6:12 PM IST

Updated : May 8, 2020, 7:33 PM IST

ಭಟ್ಕಳ(ಉತ್ತರ ಕನ್ನಡ): ಒಂದೇ ದಿನ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಭಟ್ಕಳ ನಗರವನ್ನು ಸೀಲ್ ​ಡೌನ್​ ಮಾಡಿ, ಮದೀನಾ ಕಾಲೋನಿಯನ್ನು ಹಾಟ್​ ಸ್ಪಾಟ್ ಕ್ಲಸ್ಟರ್ ಝೋನ್​​ ಎಂದು ಘೋಷಿಸಲಾಗಿದೆ.

ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮದೀನಾ ಕಾಲೋನಿಯಲ್ಲಿ ಬ್ಯಾರಿಕೇಡ್​​ ಮತ್ತು ಕಂಬಗಳನ್ನು ಹಾಕಿ, ಜನರ ಓಡಾಟ, ವಾಹನ ಸಂಚಾರ ಸಂಪೂರ್ಣ ಬಂದ್​​ ಮಾಡಲಾಗಿದೆ. ಒಮ್ಮೆಲೇ‌ 12 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದರಿಂದ ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಜನರ ಓಡಾಟ ಬಂದ್ ಮಾಡಲಾಗಿದೆ.

ಮದೀನಾ ಕಾಲೋನಿ, ಜಾಲಿ, ತೆಂಗಿನ ಗುಂಡಿ ಸೇರಿದಂತೆ ಪಟ್ಟಣಕ್ಕೆ ಸೇರುವ ಅತೀ ಸೂಕ್ಷ್ಮವಾದ ಅನೇಕ ರಸ್ತೆಗಳನ್ನು ಬ್ಯಾರಿಕೇಡ್​​​ ಮತ್ತು ಕಂಬಗಳಿಂದ ಬಂದ್​ ಮಾಡಲಾಗಿದೆ.

ಭಟ್ಕಳ ನಗರ ಸಂಪೂರ್ಣ ಸೀಲ್​ಡೌನ್
ಭಟ್ಕಳ ನಗರ ಸಂಪೂರ್ಣ ಸೀಲ್​ ಡೌನ್

ಔಷಧಿ ಸಿಂಪಡಣೆ:

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವೈರಸ್ ಹರಡದಂತೆ ಸೋಡಿಯಂ ಹೈಫೋ ಕ್ಲೋರೈಡ್ ಔಷಧಿ ಸಿಂಪಡಣೆ ಮಾಡಲಾಗಿದೆ. ಇಲ್ಲಿನ ಮದೀನಾ ಕಾಲೋನಿಯ ನೂರು ಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ, ಗುಡ್ ಲಕ್ ರಸ್ತೆ ಹಾಗೂ ಕೋಕ್ತಿ ನಗರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು.

ಇದಲ್ಲದೇ ಕೊರೋನಾ ಸೋಂಕು ದೃಢಪಟ್ಟವರ ಹದಿನೈದು ಮನೆಗಳಲ್ಲಿ ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.

ಭಟ್ಕಳ ತಹಶೀಲ್ದಾರ್ ಎಸ್​.ರವಿಚಂದ್ರ ಅವರ ಮಾರ್ಗದರ್ಶನದಲ್ಲಿ, ಮುಖ್ಯಾಧಿಕಾರಿಗಳಾದ ದೇವರಾಜ್, ವೇಣುಗೋಪಾಲ್ ಶಾಸ್ತ್ರಿ, ಆರೋಗ್ಯ ನಿರೀಕ್ಷಕರಾದ ಅಜಯ್ ಭಂಡಾರಕರ್ ಹಾಗೂ ವಿನಾಯಕ್ ಈ ಔಷಧಿ ಸಿಂಪಡಣೆ ಕಾರ್ಯದ ನೇತೃತ್ವ ವಹಿಸಿದ್ದಾರೆ.

Last Updated : May 8, 2020, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.