ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 109 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರ ಜೊತೆಗೆ 180 ಮಂದಿ ಗುಣಮುಖರಾಗಿದ್ದಾರೆ.
ಇಂದು ಕಾರವಾರ 11, ಅಂಕೋಲಾ 6, ಕುಮಟಾ 12, ಹೊನ್ನಾವರ 6, ಭಟ್ಕಳ 14, ಶಿರಸಿ 18, ಸಿದ್ದಾಪುರ 7, ಮುಂಡಗೋಡ 10, ಹಳಿಯಾಳ 20 ಹಾಗೂ ಜೊಯಿಡಾದಲ್ಲಿ 5 ಮಂದಿಯಲ್ಲಿ ಸೋಂಕು ಧೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,860 ಕ್ಕೆ ಏರಿಕೆಯಾಗಿದೆ.
180 ಮಂದಿ ಕೊರೊನಾದಿಂದ ಗುಣಮುಖ:
ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 5, ಅಂಕೋಲಾ 21, ಕುಮಟಾ 6, ಹೊನ್ನಾವರ 8, ಭಟ್ಕಳ 32, ಶಿರಸಿ 7, ಸಿದ್ದಾಪುರ 22, ಯಲ್ಲಾಪುರ 14, ಮುಂಡಗೋಡ 32 ಹಾಗೂ ಹಳಿಯಾಳದ 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 3664 ಮಂದಿ ಗುಣಮುಖರಾದಂತಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 52 ಮಂದಿ ಸಾವನ್ನಪ್ಪಿದ್ದು, 1144 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.