ETV Bharat / state

ಉತ್ತರಕನ್ನಡದಲ್ಲಿ ವರುಣಾರ್ಭಟ.. ಕದ್ರಾ ಅಣೆಕಟ್ಟಿನಿಂದ 10,050 ಕ್ಯೂಸೆಕ್​ ನೀರು ಹೊರಕ್ಕೆ.. - ಕದ್ರಾ ಜಲಾನಯನ ಪ್ರದೇಶ

ಜಲಾಶಯಕ್ಕೆ ಒಳಹರಿವಿನ ಪ್ರಮಾಣ 29,876 ಕ್ಯೂಸೆಕ್​​​ ಇದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ. ಪ್ರತಿ ಗೇಟುಗಳಿಂದಲೂ 3,350 ಕ್ಯೂಸೆಕ್​​​​​​ ನೀರನ್ನು ನದಿಗೆ ಬಿಡಲಾಗಿದ್ದು, ಕದ್ರಾ ಅಣೆಕಟ್ಟೆಯ ಜಲಾಶಯದ ಕೆಳ ಭಾಗದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನ ಹೊರ ಬಿಡದಂತೆ ಸೂಚಿಸಲಾಗಿದೆ..

..ಕದ್ರಾ ಅಣೆಕಟ್ಟಿನಿಂದ 10,050 ಕ್ಯೂಸೆಕ್​ ನೀರು ಹೊರಕ್ಕೆ

author img

By

Published : Jul 14, 2021, 8:32 PM IST

ಕಾರವಾರ(ಉ.ಕ) : ಕಾಳಿನದಿ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ ಬುಧವಾರ ಮೂರು ಗೇಟ್​​ಗಳ ಮೂಲಕ 10,050 ಕ್ಯೂಸೆಕ್​ ನೀರನ್ನು ಹೊರ ಬಿಡಲಾಗಿದೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರ್‌ಗಳಾಗಿದ್ದು, ಜುಲೈ 14ರ ಮಧ್ಯಾಹ್ನ 3 ಗಂಟೆಗೆ ಜಲಾಶಯ ಮಟ್ಟ 31.38 ಮೀಟರ್ ತಲುಪಿದೆ.

ಜಲಾಶಯಕ್ಕೆ ಒಳಹರಿವಿನ ಪ್ರಮಾಣ 29,876 ಕ್ಯೂಸೆಕ್​​​ ಇದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ. ಪ್ರತಿ ಗೇಟುಗಳಿಂದಲೂ 3,350 ಕ್ಯೂಸೆಕ್​​​​​​ ನೀರನ್ನು ನದಿಗೆ ಬಿಡಲಾಗಿದ್ದು, ಕದ್ರಾ ಅಣೆಕಟ್ಟೆಯ ಜಲಾಶಯದ ಕೆಳ ಭಾಗದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನ ಹೊರ ಬಿಡದಂತೆ ಸೂಚಿಸಲಾಗಿದೆ.

ಅಲ್ಲದೆ ದೋಣಿ ಸಂಚಾರ, ಮೀನುಗಾರಿಕೆ ಸೇರಿ ಇತರ ಚಟುವಟಿಕೆಗಳನ್ನು ಈ ಅವಧಿಯಲ್ಲಿ ನಡೆಸಬಾರದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕದ್ರಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.