ಶಿರಸಿ : ತಾಲೂಕಿನ ನರೂರಿನ ವ್ಯಕ್ತಿಯೊಬ್ಬರ ಬೈಕ್ ಕಳ್ಳತನ ಮಾಡಿದ್ದ ಬನವಾಸಿಯ ಆರೋಪಿಗೆ ಒಂದೂವರೆ ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 3ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
ಬನವಾಸಿಯ ಗಣಪತಿ ದ್ಯಾವಪ್ಪ ನಾಯ್ಕ ಶಿಕ್ಷೆಗೊಳಗಾದ ವ್ಯಕ್ತಿ. 2015ರ ಜೂನ್ 17ರಂದು ಆರೋಪಿ ಗಣಪತಿ, ತಾವು ಖರೀದಿಸಿದ್ದ ಹೊಸ ಬೈಕ್‌ನ ಕದ್ದೊಯ್ದಿದ್ದಾಗಿ ರಾಮಾನಾಯ್ಕ ಎಂಬುವರು ದೂರು ನೀಡಿದ್ದರು.
ದೂರು ಆಧರಿಸಿ ಬನವಾಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜು ಶೇಡಬಾಳ್ಕರ್ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸೋಫಿಯಾ ಶಹಬುದ್ದೀನ ಸಾಬ್ ಇನಾಮದಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ.. ಪಿಎಂ ಕೇರ್ ಫಂಡ್ ಬಗ್ಗೆ ಸೋನಿಯಾ ಟ್ವೀಟ್ ಪ್ರಕರಣ: ಸರ್ಕಾರ, ಸಾಗರ ಪೊಲೀಸರಿಗೆ ಹೈಕೋರ್ಟ್ ನೋಟಿಸ್