ETV Bharat / state

ಕಾರಿನೊಳಗೆ ಸುಟ್ಟು ಕರಕಲಾದ ಯುವಜೋಡಿ: ಘಟನೆಗೂ ಮುನ್ನ ಪೋಷಕರಿಗೆ ಸಂದೇಶ ರವಾನೆ - ಕಾರಿನೊಳಗೆ ಸುಟ್ಟುಕರಕಲಾದ ಯುವಜೋಡಿ

ಪೊಲೀಸರ ಪ್ರಕಾರ ಇಬ್ಬರು ಆರ್‌ಟಿ ನಗರದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೊತ್ತಿ ಉರಿಯುತ್ತಿದ್ದ ಕಾರು ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಪೊಲೀಸರು ಆಗಮಿಸಿದ ನಂತರ ಅಲ್ಲಿ ಯುವಕ ಮತ್ತು ಯುವತಿಯ ಸುಟ್ಟ ಶವಗಳು ಪತ್ತೆಯಾಗಿವೆ.

ಕಾರಿನೊಳಗೆ ಸುಟ್ಟುಕರಕಲಾದ ಯುವಜೋಡಿ
ಕಾರಿನೊಳಗೆ ಸುಟ್ಟುಕರಕಲಾದ ಯುವಜೋಡಿ
author img

By

Published : May 22, 2022, 4:55 PM IST

Updated : May 22, 2022, 5:18 PM IST

ಉಡುಪಿ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ನಡೆದಿದೆ. ಇಂದು ಮುಂಜಾನೆ 3ಗಂಟೆ ಸುಮಾರಿಗೆ ಬೆಂಕಿಹೊತ್ತಿ ಉರಿಯುತ್ತಿದ್ದ ಕಾರು ಕಾಣಿಸಿಕೊಂಡಿದೆ. ಬೆಂಗಳೂರು ಆರ್.ಟಿ.ನಗರದ 23 ವರ್ಷದ ಯಶವಂತ ಯಾದವ್, ಜ್ಯೋತಿ ಮೃತಪಟ್ಟ ಯುವ ಜೋಡಿಗಳಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ‌ ಈ ಜೋಡಿಯು ನಾಪತ್ತೆ ಆಗಿರುವ ಬಗ್ಗೆ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ನಿನ್ನೆ ಮಂಗಳೂರಿಗೆ ಬಂದ ಈ ಜೋಡಿ ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದಿದ್ದರು. ಹಾಗೆ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು.

5,000 ಪಾವತಿಸಿ ಆಧಾರ್ ಕೊಟ್ಟು ಬಾಡಿಗೆ ಕಾರು ಪಡೆದಿದ್ದ ಇವರು, ಕಾರಿನೊಳಗೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ಈ ವೇಳೆ ಸ್ವಿಫ್ಟ್ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಎಫ್ಎಸ್ಎಲ್ ತಂಡದಿಂದ ಸ್ಥಳದ ಮಹಜರಿಗೆ ಸಿದ್ಧತೆ ನಡೆದಿದ್ದು, ಬಳಿಕ ಮಣಿಪಾಲದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಿರ್ಜನ ಪ್ರದೇಶಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಯುವ ಜೋಡಿಯ ಕುಟುಂಬದ ಓರ್ವ ಸದಸ್ಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಬ್ರಹ್ಮಾವರ ಪೊಲೀಸರು ಮತ್ತು ಎಫ್​ಎಸ್​​ಎಲ್ ತಂಡ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಿದರು.

ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತುಮಕೂರು : ಇತಿಹಾಸ ಪ್ರಸಿದ್ಧ ಗೂಳೂರು ಕೆರೆ ಒತ್ತುವರಿ

Last Updated : May 22, 2022, 5:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.