ಉಡುಪಿ : ತಮಿಳುನಾಡಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್‌ಕುಮಾರ್, ನಾವು ಪರೀಕ್ಷೆ ರದ್ದು ಮಾಡುವ ಸ್ಥಿತಿಯಲ್ಲಿ ಇಲ್ಲ. ನಾವು ಬಹಳ ಮುಂದೆ ಹೋಗಿದ್ದೇವೆ. ನಾವು ಅವರನ್ನು ಫಾಲೋ ಮಾಡಲ್ಲ, ಮಕ್ಕಳ ಹಿತಕ್ಕೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮಕ್ಕಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಮಕ್ಕಳಲ್ಲಿ, ಶಿಕ್ಷಕರಲ್ಲಿ ಗೊಂದಲ ಬೇಡ. ಮಾಧ್ಯಮಗಳ ಮೂಲಕ ರಿಕ್ವೆಸ್ಟ್ ಮಾಡುತ್ತೇನೆ. ಮಕ್ಕಳ ಮನಸ್ಸಿನಲ್ಲಿ ಗೊಂದಲ ಬೇಡ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಎಲ್ಕೆಜಿ, ಯುಕೆಜಿಗೆ ಆನ್ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ಲೈನ್ ಶಿಕ್ಷಣ ಒಳಿತಲ್ಲ. ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಬಹುತೇಕ ಅಗಸ್ಟ್ ನಂತರ ರಾಜ್ಯದಲ್ಲಿ ಶಾಲೆಗಳು ಆರಂಭವಾಗಬಹುದು. ಸಚಿವ ಸಂಪುಟದಲ್ಲಿ ಈ ಕುರಿತು ನಾವು ಚರ್ಚೆ ಮಾಡುತ್ತೇವೆ. ಸದ್ಯಕ್ಕಂತೂ ಯಾವುದೇ ಶಾಲೆಯನ್ನು ಆರಂಭ ಮಾಡುವ ಉದ್ದೇಶ ಇಲ್ಲ. ಶಾಲೆ ಆರಂಭ ಮಾಡುವಾಗಲೂ ಹಂತಹಂತವಾಗಿ ಮಾಡುತ್ತೇವೆ.
ಮೊದಲು ಹೈಸ್ಕೂಲು ನಂತರ ಮಿಡಲ್ ಸ್ಕೂಲು. ಬಳಿಕ ಹೈಯರ್ ಪ್ರೈಮರಿ ಸ್ಕೂಲ್ ಆರಂಭಿಸುತ್ತೇವೆ ಅಂತಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆ ರಾಜ್ಯಾದ್ಯಂತ ಜೂನ್ 25ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ವಲಸೆ ಕಾರ್ಮಿಕ ಮಕ್ಕಳಿಗೆ ಎರಡು ಆಯ್ಕೆ ಇದೆ. ಅವರು ಊರಲ್ಲೂ ಪರೀಕ್ಷೆ ಬರೆಯಬಹುದು. ಮೂಲ ಸೆಂಟರ್‌ನಲ್ಲೂ ಪರೀಕ್ಷೆ ಬರೆಯಬಹುದು. ಕೊರೊನಾದಿಂದ ದೀರ್ಘ ಕಾಲದ ಪರಿಣಾಮ ಬಿದ್ದಿದೆ.
ನಾಳೆಯಿಂದ ಪೋಷಕರ ಅಭಿಪ್ರಾಯ ಸಂಗ್ರಹ ಜೊತೆ ಮೂರು ಪ್ರಶ್ನೆ ಹೊತ್ತು ಅಭಿಪ್ರಾಯ ಸಂಗ್ರಹ ಆಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನದಂತೆ ಅಭಿಪ್ರಾಯ ಸಂಗ್ರಹ ಮಾಡಲಿದ್ದೇವೆ. ಯಾವಾಗ ಶಾಲೆ ಪ್ರಾರಂಭ ಆಗಬೇಕು?ಶಾಲೆಗಳನ್ನು ಹೇಗೆ ನಡೆಸಬೇಕು? ಪೋಷಕರ ಮನಸ್ಸಿನಲ್ಲಿ ಏನಿದೆ ಎಂಬ ಮಾಹಿತಿ ಸಂಗ್ರಹಿಸುತ್ತೇವೆ. ನಾಳೆಯಿಂದ ಪ್ರಜಾಸತ್ತಾತ್ಮಕ ರೀತಿ ಅಭಿಪ್ರಾಯ ಸಂಗ್ರಹಿಸಲಿದ್ದೇವೆ ಎಂದಿದ್ದಾರೆ.