ಉಡುಪಿ: ಕರಾವಳಿ ತೀರ ಬಹಳಷ್ಟು ವಿಶಾಲವಾಗಿದೆ. ಇಡೀ ರಾಜ್ಯಕ್ಕೆ ಮಾತ್ರವಲ್ಲ ಇತರ ರಾಜ್ಯಗಳಿಗೂ ವಿದ್ಯುತ್ ಬೆಳಕು ನೀಡುವಷ್ಟು ಸಮುದ್ರದ ಅಲೆಗಳು ಸಕ್ಷಮವಾಗಿವೆ. ಯಾಕಂದ್ರೆ, ಈಗ ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಲು ಸಾಧ್ಯ ಅನ್ನೋದನ್ನು ಉಡುಪಿಯ ವಿಜಯ ಹೆಗ್ಡೆ ಎಂಬ ಸಂಶೋಧಕರು ಸಾಬೀತುಪಡಿಸಿದ್ದಾರೆ. ಇವರು ತೀರಕ್ಕೆ ಬಂದು ಅಪ್ಪಳಿಸಿ ವಾಪಸ್ ಹೋಗೋ ಅಲೆಗಳಿಂದ ಹೇರಳ ಪ್ರಮಾಣದ ಎನರ್ಜಿ ವೇಸ್ಟಾಗ್ತಿದೆ ಅನ್ನೋದು ಇವರ ಮನಸ್ಸಿಗೆ ಬಂದದ್ದೇ, ತಡ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ.
ಸತತ ಮೂರು ದಶಕಗಳ ಸಂಶೋಧನೆಯ ಫಲವಾಗಿ ಅಲೆಗಳಿಂದಲೂ ವಿದ್ಯುತ್ ತಯಾರಿಸಬಹುದು ಎಂಬುದನ್ನು ಇವರು ಮಾಡಿ ತೋರಿಸಿದ್ದಾರೆ. ಕಡಲ ಅಲೆಗಳಿಂದ ವಿಜಯ ಹೆಗ್ಡೆ ವಿದ್ಯುತ್ ತಯಾರಿಸ್ತಾರೆ. ಇದು ಪ್ರಾಯೋಗಿಕ ಹಂತ ತಲುಪಿದ್ದು, ಕಾರ್ಪೊರೇಷನ್ ಟ್ರೀಟಿ ಅವರು ಇವರ ಈ ಸಂಶೋಧನೆಗೆ ಹಕ್ಕು ಸ್ವಾಮ್ಯ ನೀಡಿದ್ದಾರೆ. ಅಪ್ಪಟ ದೇಶೀ ಸಂಶೋಧಕನ ಈ ಸಂಶೋಧನೆ ನಿಜಕ್ಕೂ ಎಲ್ಲರ ಗಮನ ಸೆಳೆದಿದೆ.
ಸಮುದ್ರದ ಅಲೆಗಳಿಗೆ ಅಳೆಯಲಾಗದಷ್ಟು ಶಕ್ತಿಯಿದೆ. ಅದನ್ನು ವಿದ್ಯುತ್ ಆಗಿ ಪರಿವರ್ತಿಸೋದೆ ಈ ಯೋಜನೆಯ ಗುಟ್ಟು. ಮಲ್ಪೆಯ ಹೂಡೆ ಸಮೀಪದ ಕಡಲತಡಿಯಲ್ಲಿ ಯಂತ್ರವೊಂದನ್ನು ಪ್ರಾಯೋಗಿಕವಾಗಿ ಅಳವಡಿಸಲು ಹೆಗ್ಗಡೆ ಸಜ್ಜಾಗಿದ್ದಾರೆ.
ಏರ್ ಟೈಮ್ ಡ್ರಮ್ ಚಲನೆ, ಚಕ್ರವನ್ನು ತಿರುಗಿಸುತ್ತೆ. ಸ್ಟೆಪ್ ಅಪ್ ಗೇರ್ ಚಕ್ರದ ವೇಗ ಹೆಚ್ಚಿಸುತ್ತೆ. ಈ ಚಲನೆ ವಿದ್ಯುತ್ ಆಗಿ ಪರಿವರ್ತನೆಗೊಳ್ಳುತ್ತೆ. ವಿವರಣೆ ಸಿಂಪಲ್ ಆಗಿದ್ರು ಕೂಡ ಶ್ರಮ ಅಪಾರವಾಗಿದೆ. ಕಡಲ ತಡಿಯಲ್ಲಿ ಬೃಹತ್ ಘಟಕ ನಿರ್ಮಿಸುವ ಕನಸು ಹೆಗ್ಡೆ ಅವರಿಗಿದೆ. ಆದ್ರೆ, ಸರ್ಕಾರದ ಸಹಕಾರ ಇವರಿಗೆ ಅಗತ್ಯವಾಗಿದೆ.
ಸಿಎಂ ಯಡಿಯೂರಪ್ಪ ಕಡಲ ಅಲೆಯಿಂದ ತಯಾರಾಗೋ ವಿದ್ಯುತ್‌ನ ಸಾಗರೋತ್ಪನ್ನ ಎಂದು ಪರಿಗಣಿಸೋದಾಗಿ ಕರೆ ಕೊಟ್ಟಿದ್ದಾರೆ. ಹೀಗಾಗಿ, ಸಮುದ್ರದ ಅಲೆಯಿಂದ ವಿದ್ಯುತ್ ತಯಾರಿಸೋ ಯೋಜನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.