ಉಡುಪಿ: ರಸ್ತೆ ನಿಯಮ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಆಟೋರಿಕ್ಷಾ ಚಾಲಕರೊಬ್ಬರು ಹಾಗೂ ಪೊಲೀಸರ ನಡುವೆ ನಡೆದ ಮಾತಿನ ಸಮರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಉಡುಪಿ ನಗರದ ಕಲ್ಸಂಕದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಾಸ್ಕ್ ಹಾಕದೇ ರಿಕ್ಷಾ ಚಲಾಯಿಸಿಕೊಂಡು ಬಂದ ಹಿರಿಯ ಚಾಲಕರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿ, ಮಾಸ್ಕ್ ಯಾಕೆ ಹಾಕಿಲ್ಲ, ದಾಖಲೆಗಳು ಎಲ್ಲಿ ಅಂತ ಕೇಳಿದ್ರು. ರಿಕ್ಷಾ ಚಾಲಕನ ಬಳಿ ಯಾವುದು ದಾಖಲೆ ಇಲ್ಲದಿರುವುದು ಗೊತ್ತಾದಾಗ ಪೊಲೀಸರು ರಿಕ್ಷಾವನ್ನು ಇಲ್ಲೇ ಬಿಡಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆಟೋ ಚಾಲಕ, ನಾನು ಕದ್ದು ತಂದದ್ದು ಅಲ್ಲ, ರಿಕ್ಷಾ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಹಠ ಹಿಡಿದ್ದಾರೆ. ಕೊನೆಗೆ ದಂಡ ಕಟ್ಟಿ ಅಂತಾ ಪೊಲೀಸರು ಹೇಳಿದಾಗ, ಎಲ್ಲ ಮನೆಯಲ್ಲಿ ಇದೆ, ನಾನು ಏನೂ ತರಲಿಲ್ಲ. ನಾನು ದಂಡ ಕಟ್ಟುವುದಿಲ್ಲ ಎಂದು ಹೇಳಿದ್ದಾನೆ. ಸದ್ಯಕ್ಕೆ ಪೊಲೀಸರು ಹಾಗೂ ಹಿರಿಯ ಚಾಲಕರೊಬ್ಬರ ಮಾತಿನ ಸಮರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆ ನಡೆಯುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ