ETV Bharat / state

ಕಳ್ಳತನಕ್ಕೆಂದು ಬಂದು ಕಣ್ಣಿಗೆ ಬಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು

ದರೋಡೆ ಯತ್ನದಲ್ಲಿ ವಿಫಲವಾಗಿ ಬಳಿಕ ಆಟೋ, ಬೈಕ್​ಗೆ ಬೆಂಕಿ ಹಚ್ಚಿರುವುದಲ್ಲದೆ ಮತ್ತೊಂದು ಕಡೆ ತೆರಳಿ ಸರಣಿ ಕಳ್ಳತನ ನಡೆಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

unknown-persons-burned-parked-vehicles-and-robbed-several-house-in-udupi
ಕಳ್ಳತನಕ್ಕೆಂದು ಕಣ್ಣಿಗೆ ಬಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು
author img

By

Published : Apr 6, 2021, 6:20 PM IST

ಉಡುಪಿ: ‌ ಸರಣಿ ದರೋಡೆ ಯತ್ನ ನಡೆಸಿ‌‌ ಸಿಕ್ಕ‌ ಸಿಕ್ಕ‌ ವಾಹನ ಸುಟ್ಟು ‌ಹಾಕಿರುವ ಘಟನೆ ಬೈಲೂರು ಹಾಗೂ ಮಾರ್ಪಳ್ಳಿಯಲ್ಲಿ ನಡೆದಿದೆ. ಇಲ್ಲಿನ ಬೈಲೂರು ವಾರ್ಡ್​​​​ನ ದುರ್ಗಾ ನಗರದಲ್ಲಿ ಬೈಕ್, ಆಟೋಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಒಂದು ಮನೆಯ ಗಾಜು ಒಡೆದು ಮತ್ತೊಂದು ಮನೆಯಲ್ಲಿ ಇನ್ವರ್ಟರ್ ವೈಯರ್ ಕಟ್ ಮಾಡಿ ದರೋಡೆ ಯತ್ನ ನಡೆಸಲಾಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಕೈಚಳಕ ತೋರಿದ್ದು, ಬೈಲೂರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮತ್ತೆ ಸರಣಿ ಕಳವು ನಡೆದಿದೆ.

ಕಳ್ಳತನಕ್ಕೆಂದು ಬಂದು ಕಣ್ಣಿಗೆ ಬಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು

ಬೈಲೂರು ಭಾಗದಲ್ಲಿ ದರೊಡೆ ಯತ್ನ ನಡೆಸಿ ವಿಫಲವಾಗಿ ಬಳಿಕ ಮಾರ್ಪಳ್ಳಿಯಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ. ಆಟೋದಲ್ಲಿದ್ದ 2 ಸಾವಿರ ನಗದು, ದೇವಸ್ಥಾನದ ಕಾಣಿಕೆ ಹುಂಡಿ ಕಳವು ಯತ್ನ ನಡೆಸಿ ಮನೆಯೊಳಗೆ ನುಗ್ಗಿ ಚಿನ್ನ ಕಳವು‌ ಮಾಡಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 'ಖಾಯಂ ಕೆಲಸ ಬೇಕಂದ್ರೇ ನಿನ್ನ ಬೆತ್ತಲೆ ವಿಡಿಯೋ ಕಳ್ಸು..' ಎಲಾ ಇವ್ನಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.