ETV Bharat / state

ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ಬೆಂಬಲ : ಶೋಭಾ ಕರಂದ್ಲಾಜೆ ಆರೋಪ - ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆ

ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ಬೆಂಬಲ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

union-minister-shobha-karandlaje-reacts-on-wrestlers-protest
ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ಬೆಂಬಲ : ಶೋಭಾ ಕರಂದ್ಲಾಜೆ ಆರೋಪ
author img

By

Published : Jun 3, 2023, 10:46 PM IST

ಉಡುಪಿ: ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ಬೆಂಬಲ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ''ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳಿಗೆ ವಿದೇಶಿ ಫಂಡಿಂಗ್ ಇದ್ದೇ ಇರುತ್ತದೆ. ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ವಿದೇಶಿ ವ್ಯಕ್ತಿಯು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದೇಶವನ್ನು ಅಸ್ಥಿರ ಹಾಗೂ ಅತಂತ್ರ ಮಾಡುವ ಹುನ್ನಾರ ಇದರ ಹಿಂದೆ ಇದೆ'' ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ''ಕುಸ್ತಿಪಟುಗಳ ಆರೋಪದ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಯಾರನ್ನೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಕೂಡ ತನಿಖೆಗೆ ಸೂಚಿಸಿದ್ದಾರೆ. ಹೆಚ್ಚಿನ ಪ್ರಶ್ನೆಗಳಿಗೆ ಕ್ರೀಡಾ ಇಲಾಖೆಯೇ ಉತ್ತರಿಸುತ್ತದೆ'' ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ವಿಚಾರ ಪ್ರತಿಕ್ರಿಯಿಸಿದ ಅವರು, ''ದೇಶ ಎಷ್ಟು ಬರ್ಬಾದ್ ಆಗುತ್ತದೆ ಎಂಬ ಬಗ್ಗೆ ಲೆಕ್ಕಾಚಾರ ಹಾಕಬೇಕಾಗುತ್ತದೆ. ಆಂಧ್ರ ಸರ್ಕಾರ ಹಲವು ಉಚಿತ ಕೊಟ್ಟಿತ್ತು. ಈಗ ಸಂಬಳ ಕೊಡಲು ಅವರಲ್ಲಿ ಹಣವಿಲ್ಲ. ಆಂಧ್ರಪ್ರದೇಶವು ಈಗ ಮುಳುಗುವ ಪರಿಸ್ಥಿತಿ ಬಂದಿದೆ. ಕರ್ನಾಟಕದ ಪ್ರಬುದ್ಧರು ಅಲ್ಲಿಗೆ ಹೋಗಿ ಅಧ್ಯಯನ ಮಾಡಬೇಕು. ಹಣವನ್ನು ಎಲ್ಲಿಂದ ಒದಗಿಸುತ್ತಾರೆ ಎಂಬ ಬಗ್ಗೆ ಕಾಂಗ್ರೆಸ್​ನವರು ವರದಿ ಕೊಡಬೇಕು. ಕರ್ನಾಟಕದ ಪರಿಸ್ಥಿತಿಗೆ ಆಂಧ್ರದಂತೆ ಆಗಬಾರದು. ಈ ಬಗ್ಗೆ ನಾವೆಲ್ಲ ಚಿಂತಿಸಬೇಕಿದೆ'' ಎಂದರು.

''ಈಗಷ್ಟೇ ಆರಂಭವಾಗಿರುವ ಗ್ಯಾರಂಟಿಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಲೋಕಸಭಾ ಚುನಾವಣೆಗೆ ಮೇಲೆ ಈ ಗ್ಯಾರಂಟಿಗಳ ಎಫೆಕ್ಟ್ ಆಗಲ್ಲ. ನಮ್ಮ ಜನ ವಿದ್ಯಾವಂತ, ಬುದ್ಧಿವಂತರು ಹಾಗೂ ದೇಶಪ್ರೇಮಿಗಳಿದ್ದಾರೆ. ಭಾರತಕ್ಕೆ ವಿಶ್ವ ಮಾನ್ಯತೆ ಸಿಗುವುದು ಪ್ರಧಾನಿ ನರೇಂದ್ರ ಮೋದಿ ಕಾರಣಕ್ಕಾಗಿದೆ. ದೇಶದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಹೇಳಿರುವುದು ಒಳ್ಳೆದಾಯ್ತು'' ಎಂದು ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.

ಗ್ಯಾರಂಟಿ ಘೋಷಣೆ ಬೆನ್ನಲ್ಲೇ ''ಶೋಭಾ ಕರಂದ್ಲಾಜೆಗೂ ಫ್ರೀ ಸರ್ಕಾರಿ ಬಸ್'' ಎಂಬ ಕಾಂಗ್ರೆಸ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಟ್ವೀಟ್​ನಲ್ಲಿ ಕಾಂಗ್ರೆಸ್ ಅಹಂಕಾರ ತೋರಿಸಿದೆ. ಜನ ಅಹಂಕಾರಕ್ಕೆ ಮದ್ದು ಕೊಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ನಿರ್ಧಾರ ಬದಲಿಸಿ ಸರ್ಕಾರಕ್ಕೆ ಐದು ದಿನಗಳ ಗಡುವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.