ETV Bharat / state

ಕೃಷ್ಣ ಮಠ ಸೌರಮಯ: ಸೂರ್ಯನ ಬೆಳಕಿನಲ್ಲಿ ಮಿನುಗಲಿದ್ದಾನೆ ಉಡುಪಿಯ ಕೃಷ್ಣ - solar panel setup

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಲಾಗಿದೆ. ಮಠಕ್ಕೆ ಬೇಕಾದಷ್ಟು ವಿದ್ಯುತ್ ಸಂಪೂರ್ಣ ಬಳಕೆಯಾದ ನಂತರ ಮಿಕ್ಕಿದ ವಿದ್ಯುತ್ತನ್ನು ಮೆಸ್ಕಾಂಗೆ ಮಾರಾಟ ಮಾಡಲು ಕೃಷ್ಣ ಮಠ ಸಜ್ಜಾಗಿದೆ.

solar panel setup in Krishna Math
ಕೃಷ್ಣ ಮಠದಲ್ಲಿ ಸೋಲಾರ್ ಅಳವಡಿಕೆ
author img

By

Published : Jun 26, 2021, 11:40 AM IST

ಉಡುಪಿ: ಇನ್ನು ಮುಂದೆ ಸೂರ್ಯನ ಬೆಳಕಿನಲ್ಲಿ ಉಡುಪಿಯ ಕೃಷ್ಣ ಮಿನುಗಲಿದ್ದಾನೆ, ಸಂಪೂರ್ಣ ಕೃಷ್ಣಮಠ ಸೌರ ಮಯವಾಗಿದೆ. ದೇಶಿತನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪರ್ಯಾಯ ಅದಮಾರು ಮಠದವರು ಕೃಷ್ಣ ಮಠದ ಸಂಪೂರ್ಣ ವಿದ್ಯುತ್ ವ್ಯವಸ್ಥೆಯನ್ನು ಸೋಲಾರ್ ಸಿಸ್ಟಮ್​​ಗೆ ವರ್ಗಾಯಿಸಿದ್ದಾರೆ.

ಲಾಕ್​​ಡೌನ್​​ ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ದೇವಾಲಯಗಳು- ಮಠಗಳು ಇನ್ನೂ ತೆರೆದಿಲ್ಲ. ಅದಮಾರು ಮಠದ ಪರ್ಯಾಯ ಆರಂಭವಾದಾಗಿನಿಂದ ಉಡುಪಿಯ ಕೃಷ್ಣ ಮಠದಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಮಠಕ್ಕೆ ಭಕ್ತರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಈ ಸಂದರ್ಭವನ್ನು ಅನುಕೂಲವಾಗಿ ಮಾಡಿಕೊಂಡಿರುವ ಅದಮಾರು ಮಠದವರು ಕೃಷ್ಣ ಮಠದ ಜೀರ್ಣೋದ್ಧಾರಕ್ಕೆ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.

ಕೃಷ್ಣ ಮಠದಲ್ಲಿ ಸೋಲಾರ್ ಅಳವಡಿಕೆ..

ರಾಸಾಯನಿಕ ಮುಕ್ತ ವಾತಾವರಣಕ್ಕೆ ಒತ್ತು:

ಸ್ವದೇಶಿ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುವ ಅದಮಾರು ಮಠದ ಈಶಪ್ರಿಯ ತೀರ್ಥರು ಈಗಾಗಲೇ ಸಂಪೂರ್ಣ ಮಠವನ್ನು ದೇಶಿತನಕ್ಕೆ ಮಾರ್ಪಾಟು ಮಾಡಿದ್ದಾರೆ. ಸುಣ್ಣಬಣ್ಣ ಅಲಂಕಾರ ಪ್ರತಿಯೊಂದರಲ್ಲೂ ರಾಸಾಯನಿಕ ಮುಕ್ತ ವಾತಾವರಣಕ್ಕೆ ಒತ್ತು ನೀಡಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಲಾಗಿದ್ದು, ಮಠದ ಸಂಪೂರ್ಣ ವಿದ್ಯುದೀಕರಣ ವ್ಯವಸ್ಥೆಯನ್ನು ಸೋಲಾರ್ ಸಿಸ್ಟಮ್​​ಗೆ ಬದಲಾಯಿಸಲಾಗಿದೆ.

ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ಸೋಲಾರ್ ಪ್ಯಾನಲ್​​ಗಳನ್ನು ಅಳವಡಿಸಲಾಗಿದೆ. ಮಠಕ್ಕೆ ಬೇಕಾದಷ್ಟು ವಿದ್ಯುತ್ ಸಂಪೂರ್ಣ ಬಳಕೆಯಾದ ನಂತರ ಉಳಿದ ವಿದ್ಯುತ್​​ನ್ನು ಮೆಸ್ಕಾಂಗೆ ಮಾರಾಟ ಮಾಡಲು ಕೃಷ್ಣಮಠ ಸಜ್ಜಾಗಿದೆ. ರಾಜಾಂಗಣದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್​​ಗಳನ್ನು ಅಳವಡಿಸಲಾಗಿದೆ.

ಒಂದು ಲಕ್ಷಕ್ಕೂ ಅಧಿಕ ಹಣ ಉಳಿತಾಯ:

ಕೃಷ್ಣಮಠವನ್ನು ಸೋಲಾರ್ ಸಿಸ್ಟಮ್​​ಗೆ ಬದಲಾಯಿಸಿದ ನಂತರ ಪ್ರತಿ ತಿಂಗಳು ಸುಮಾರು ಒಂದು ಲಕ್ಷಕ್ಕೂ ಅಧಿಕ ಹಣ ಉಳಿತಾಯವಾಗಲಿದೆ. ಉಳಿಕೆಯ ಹಣವನ್ನು ಭಕ್ತರ ವಿವಿಧ ಸೇವೆಗಳಿಗೆ ವಿನಿಯೋಗಿಸಲು ಮಠ ಚಿಂತನೆ ನಡೆಸಿದೆ. ಈಗಾಗಲೇ ಬಂದಿರುವ ಉಳಿತಾಯದ ಹಣದಲ್ಲಿ ಕೊರೊನಾ ಸಂದಿಗ್ಧತೆಯಿಂದ ಬಳಲುತ್ತಿರುವ ಆರೋಗ್ಯ ಇಲಾಖೆಗೆ ಸುಸಜ್ಜಿತ ಆ್ಯಂಬುಲೆನ್ಸ್ ನೀಡಲು ಉಪಯೋಗಿಸಲಾಗಿದೆ. ಸುಮಾರು ಐದು ವರ್ಷಗಳಲ್ಲಿ ತಗಲಿರುವ ವೆಚ್ಚದ ಸಂಪೂರ್ಣ ಹಣ ವಾಪಸ್ ಆಗುವ ಸಾಧ್ಯತೆಯಿದೆ.

ಮುಂದಿನ ವರ್ಷಗಳಲ್ಲಿ ಮಠಕ್ಕೆ ವಿದ್ಯುತ್ ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದ್ದು, ಕೃಷ್ಣಮಠದ ಚಿತ್ರಣವೇ ಬದಲಾಗಿದೆ. ಸದ್ಯ ನಾವು ಬಳಸುವ ಸಾಂಪ್ರದಾಯಕ ವಿದ್ಯುತ್ ವ್ಯವಸ್ಥೆಯಲ್ಲಿ ಕಲ್ಲಿದ್ದಲು ಅಥವಾ ಜಲವಿದ್ಯುತ್ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಬಳಸುವುದು ಪದ್ಧತಿ. ಇದರಿಂದ ಪರಿಸರಕ್ಕೆ ಅಪಾರ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಸಂಪೂರ್ಣ ಸೋಲಾರ್ ಸಿಸ್ಟಮ್ ಗೆ ಕೃಷ್ಣಮಠವನ್ನು ಬದಲಾಯಿಸುವ ನಿರ್ಧಾರವನ್ನು ಸ್ವಾಮೀಜಿ ಕೈಗೊಂಡಿದ್ದಾರೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಇದೊಂದು ಮಹತ್ವದ ನಿರ್ಧಾರವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಎರಡು ಘಟಕಗಳು ಕಾರ್ಯಾಚರಿಸುತ್ತಿವೆ. ಇದರಿಂದ ಪರಿಸರಕ್ಕೆ ಅಪಾರ ಪ್ರಮಾಣದ ಹಾನಿಯಾಗುತ್ತಿದ್ದು ಜನರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಬಳಕೆ ದೃಷ್ಟಿಯಿಂದ ಆತ್ಮ ನಿರ್ಭರವಾಗುವುದು ಕೃಷ್ಣ ಮಠದ ಉದ್ದೇಶ. ಈ ನಿರ್ಧಾರಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ISAC Award 2020: ಇಂದೋರ್ ಮತ್ತು ಸೂರತ್​ ನಗರಗಳಿಗೆ ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.