ETV Bharat / state

ಬೋಟ್​ನಿಂದ ಆಯತಪ್ಪಿ ಬಿದ್ದ ಮೀನುಗಾರ: 43 ಗಂಟೆ ಸಮುದ್ರದಲ್ಲಿ ಸೆಣಸಾಟ ನಡೆಸಿ ಬದುಕಿದ ಭೂಪ! - ಗಂಗೊಳ್ಳಿ ಬೋಟ್‍ನ ಮೀನುಗಾರರಿಗೆ ಧನ್ಯವಾದ

ಮೀನು ಹಿಡಿಯಲು ತೆರಳಿದ್ದ ದೋಣಿಯಿಂದ ಕೆಳಗೆ ಬಿದ್ದು 43 ಗಂಟೆಗಳ ಕಾಲ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರನೊಬ್ಬನನ್ನು ರಕ್ಷಣೆ ಮಾಡಲಾಗಿದೆ.

Rescue of a fisherman
ಬೋಟ್​ನಿಂದ ಆಯತಪ್ಪಿ ಬಿದ್ದ ಮೀನುಗಾರ: 43 ಗಂಟೆ ಸಮುದ್ರದಲ್ಲಿ ಸೆಣಸಾಟ ನಡೆಸಿ ಬದುಕಿದ ಭೂಪ
author img

By ETV Bharat Karnataka Team

Published : Nov 13, 2023, 10:59 AM IST

ಉಡುಪಿ: ಮೀನು ಹಿಡಿಯಲು ತೆರಳಿದ್ದ ಬೋಟ್​ನಿಂದ ಮೀನುಗಾರನೊಬ್ಬ ಆಯತಪ್ಪಿ ಅರಬ್ಬಿ ಸಮುದ್ರಕ್ಕೆ ಬಿದ್ದಿದ್ದ. ನಂತರ ಸುದೀರ್ಘ 43 ಗಂಟೆಗಳ ಕಾಲ ಈಜುತ್ತಲೇ ಬದುಕುಳಿದಿದ್ದ ಆತನನ್ನು ಗಂಗೊಳ್ಳಿ ಮೂಲದ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ತಂಡದಲ್ಲಿದ್ದ ಮುರುಗನ್​ (25) ಎಂಬ ಮೀನುಗಾರ ಬುಧವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್​ನ ಅಂಚಿಗೆ ಹೋಗಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದ. ಮುರುಗನ್​ ಸಮುದ್ರದಲ್ಲಿ ಬಿದ್ದಿರುವುದು ಇತರೆ ಮೀನುಗಾರರಿಗೆ ತಿಳಿದಿರಲಿಲ್ಲ. ಬಳಿಕ ವಿಷಯ ತಿಳಿದು ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಗನ್​ ನೀರುಪಾಲಾಗಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದರು.

ನ.10ರಂದು ಶುಕ್ರವಾರ ಸಂಜೆ ಗಂಗೊಳ್ಳಿಯ ಸಾಗರ್ ಬೋಟಿನ ಮೀನುಗಾರರು ಆಳ ಸಮುದ್ರಕ್ಕೆ ತೆರಳಿದ್ದಾಗ, ಸಮುದ್ರದಲ್ಲಿ ಯಾರೋ ಈಜುವಂತೆ ಕಂಡುಬಂದಿದೆ. ‌ಕೈಯನ್ನು ಎತ್ತಿ ರಕ್ಷಣೆಗೆ ಕೂಗಿಕೊಂಡಿದ್ದ ಯುವಕನನ್ನು ಕೂಡಲೇ ಎತ್ತಿ ಬೋಟಿಗೆ ಹಾಕಿದ್ದಾರೆ. ಬರೋಬ್ಬರಿ ಎರಡು ದಿನಗಳ ಕಾಲ ಸಮುದ್ರದಲ್ಲಿ ಈಜಾಡುತ್ತಲೇ ಬದುಕುಳಿದ ಮೀನುಗಾರ ಮುರುಗನ್​ ಬಗ್ಗೆ ತಮಿಳುನಾಡು ಮೀನುಗಾರರಿಗೆ ತಿಳಿಸಲಾಗಿದೆ. ಆಗ ಅವರು ಅಚ್ಚರಿಗೆ ಒಳಗಾಗಿದ್ದಾರೆ.‌

ಸರಿ ಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರನ ರಕ್ಷಣೆ ಮಾಡಿರುವ ವಿಷಯ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ. ಸಂಪೂರ್ಣ ನಿತ್ರಾಣಗೊಂಡಿದ್ದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ಗಂಗೊಳ್ಳಿ ಮೀನುಗಾರರು, ತಮಿಳುನಾಡಿನ ಬೋಟ್​ನವರಿಗೆ ಹಸ್ತಾಂತರ ಮಾಡಿದ್ದಾರೆ.

ಗಂಗೊಳ್ಳಿ ಬೋಟ್‍ನ ಮೀನುಗಾರರಿಗೆ ಧನ್ಯವಾದ: ಸಮುದ್ರಕ್ಕೆ ಬಿದ್ದ ಮೀನುಗಾರನ ಶವ ಹುಡುಕುತ್ತಿದ್ದ ತಮಿಳುನಾಡು ಮೀನುಗಾರರಿಗೆ ಈತ ಬದುಕಿ ಬಂದಿರೋದು ಕಂಡು ಎಲ್ಲಿಲ್ಲದ ಖುಷಿಯಾಗಿದೆ. ಗಂಗೊಳ್ಳಿ ಬೋಟ್‍ನ ಮೀನುಗಾರರಿಗೆ ಧನ್ಯವಾದ ತಿಳಿಸಿ ತಮಿಳುನಾಡಿಗೆ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: ಸಕ್ರೆಬೈಲು ಆನೆ ಭಾನುಮತಿ ಬಾಲ ಕಟ್ ಪ್ರಕರಣ : ಇಬ್ಬರು ಕಾವಾಡಿಗಳು ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.