ETV Bharat / state

ಉಡುಪಿ: ಪಚ್ಚಿಲೆ ಅಜೀರ್ ಮೀನು ಹಿಡಿಯುತ್ತಿದ್ದ ತಮಿಳುನಾಡಿನ ಮೀನುಗಾರರು ಪೊಲೀಸರ ವಶಕ್ಕೆ! - pachile ajeer fish

ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರು ಸದ್ಯ ಪಡುಬಿದ್ರೆ ಪೊಲೀಸರ ವಶದಲ್ಲಿದ್ದಾರೆ.

Udupi police detained seven fisher men's under Illegal fishing
ತಮಿಳುನಾಡಿನ ಮೀನುಗಾರರು ಪಡುಬಿದ್ರೆ ಪೊಲೀಸರ ವಶಕ್ಕೆ!
author img

By

Published : Mar 19, 2022, 10:07 AM IST

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಸಮುದ್ರತೀರದಲ್ಲಿ ನಿಷೇಧಿತ ಪಚ್ಚಿಲೆ ಅಜೀರ್ ಮೀನು (ಪರ್ನವಿಡೀಸ್) ತೆಗೆಯುತ್ತಿದ್ದ ಅನ್ಯರಾಜ್ಯದ ಏಳು ಮೀನುಗಾರರನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮೀನುಗಾರರು ಅವರನ್ನು ಹಿಡಿದು ಉಚ್ಚಿಲದ ಸುಭಾಷ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದಿದ್ದರು. ಬಳಿಕ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಅವರು ಮೀನು ಹಿಡಿಯಲು ಬಳಸುತ್ತಿದ್ದ ದೋಣಿಯನ್ನು ಕೂಡ ದಂಡೆಗೆ ತಂದು ನಿಲ್ಲಿಸಲಾಗಿದೆ.

ತಮಿಳುನಾಡಿನ ಮೀನುಗಾರರು ಪಡುಬಿದ್ರೆ ಪೊಲೀಸರ ವಶಕ್ಕೆ!

ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಬಂಡೆಗೆ ಅಂಟಿಕೊಂಡಿರುವ ಈ ಜಾತಿಯ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಬಂಡೆಗೆ ಅಂಟಿಕೊಂಡಿರುವ ಪಚ್ಚಿಲೆ ಮೀನನ್ನು ತಿನ್ನಲು ನಾನಾ ಜಾತಿಯ ಮೀನುಗಳು ಸಮುದ್ರ ತೀರಕ್ಕೆ ಬರುತ್ತವೆ. ತೀರ ಪ್ರದೇಶಕ್ಕೆ ಬರುವ ಇಂತಹ ಮೀನುಗಳನ್ನು ಹಿಡಿದು ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆ ನಡೆಸುತ್ತಾರೆ. ಒಂದು ವೇಳೆ ಪಚ್ಚಿಲೆ ಮೀನು ತೆರವುಗೊಳಿಸಿದರೆ ತೀರ ಪ್ರದೇಶಕ್ಕೆ ಬರುವ ಮೀನುಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ಸ್ಥಳೀಯ ಮೀನುಗಾರರು ಯಾರೂ ಪಚ್ಚಿಲೆ ಮೀನನ್ನು ತೆಗೆಯುವುದಿಲ್ಲ.

ಹೆಚ್ಚಾಗಿ ತಮಿಳುನಾಡು ಭಾಗದಿಂದ ಬರುವ ಮೀನುಗಾರರು ಇವುಗಳನ್ನು ಹಿಡಿಯುತ್ತಾರೆ. ಒಂದು ಪುಟ್ಟ ಗೋಣಿ ಚೀಲ ಮೀನಿಗೆ ಸುಮಾರು 9 ರಿಂದ 10 ಸಾವಿರ ರೂಪಾಯಿ ಬೆಲೆ ಇರುತ್ತದೆ. ಕೇರಳದಲ್ಲಿ ಈ ಮೀನು ಸುಮಾರು 15 ಸಾವಿರ ರೂ.ಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತದೆ. ಅವುಗಳ ಸಂತತಿ ಉಳಿಸುವ ದೃಷ್ಟಿಯಿಂದ ಈ ಮೀನನ್ನು ಕರ್ನಾಟಕ ಕರಾವಳಿಯ ಮೀನುಗಾರರು ಉಳಿಸಿಕೊಂಡು ಬಂದಿದ್ದಾರೆ. ಆದರೆ, ತಮಿಳುನಾಡಿನ ಮೀನುಗಾರರು ಇದನ್ನು ಹಿಡಿದು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: ಸಂಭ್ರಮದಿಂದ ಜರುಗಿದ ಗುರುಗುಂಟಾ ಅಮರೇಶ್ವರ ಜಾತ್ರಾಮಹೋತ್ಸವ

ಇನ್ನೂ, ವೈಲ್ಡ್ ಲೈಫ್ ಆ್ಯಕ್ಟ್ ಪ್ರಕಾರ ಈ ಮೀನನ್ನು ಹಿಡಿಯುವುದನ್ನು ನಿಷೇಧಿಸಿಲ್ಲ. ಮೀನುಗಾರಿಕೆಯ ಹಿತದೃಷ್ಟಿಯಿಂದ ಇವುಗಳನ್ನು ರಕ್ಷಿಸಿಕೊಂಡು ಬರಲಾಗಿದೆ. ಸ್ಥಳೀಯ ಭಾಷೆಯಲ್ಲಿ ಪಚ್ಚಿಲೆ ಅಜೀರ್ ಅಥವಾ ನೀಲಿಕಲ್ ಎಂದು ಕರೆಯಲಾಗುವ ಈ ಮೀನಿನ ವೈಜ್ಞಾನಿಕ ಹೆಸರು ಪರ್ನವಿಡೀಸ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.