ETV Bharat / state

ಕೊರೊನಾರ್ಭಟ: ಸುಸಜ್ಜಿದ ಆ್ಯಂಬುಲೆನ್ಸ್ ಖರೀದಿಗೆ ದೇಣಿಗೆ ನೀಡಿದ ಉಡುಪಿ ಕೃಷ್ಣಮಠ - ಉಡುಪಿ ಕೃಷ್ಣಮಠ ,

ಶ್ರೀಕೃಷ್ಣ ಮಠದಲ್ಲಿ ಅಷ್ಟ ಮಠಾಧೀಶರು ಸೇರಿ ಶಾಸಕರ ಸಮ್ಮುಖದಲ್ಲಿಯೇ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್ ಅವರಿಗೆ 20 ಲಕ್ಷ ರೂಪಾಯಿ ಮೊತ್ತದ ಚೆಕ್​ನ್ನು ನೀಡಿದ್ದಾರೆ.

 Krishna Math donated money for buy ambulance

author img

By

Published : May 30, 2021, 7:02 PM IST

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ನೀಡಲು ಕೃಷ್ಣಮಠ ಮುಂದಾಗಿದೆ.

ಈ ಬಗ್ಗೆ ಶ್ರೀಕೃಷ್ಣ ಮಠದ ಅಷ್ಟ ಮಠಾಧೀಶರಲ್ಲಿ ಶಾಸಕ ಕೆ. ರಘುಪತಿ ಭಟ್ ಅವರು ಮನವಿ ಮಾಡಿದ್ದರು. ಶಾಸಕರ ಮನವಿಯಂತೆ ಇದೀಗ ಶ್ರೀಕೃಷ್ಣ ಮಠದಲ್ಲಿ ಅಷ್ಟ ಮಠಾಧೀಶರು ಸೇರಿ ಶಾಸಕರ ಸಮ್ಮುಖದಲ್ಲಿಯೇ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್ ಅವರಿಗೆ 20 ಲಕ್ಷ ರೂಪಾಯಿ ಮೊತ್ತದ ಚೆಕ್​ನ್ನು ನೀಡಿದ್ದಾರೆ.

ಎಂಟೂ ಮಠಗಳು ಒಟ್ಟಾಗಿ ನೀಡಿದ ಈ ಮೊತ್ತದಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್ ಖರೀದಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಕೃಷ್ಣಮಠದ ಚಂದ್ರಶಾಲೆಯಲ್ಲಿ ಎಲ್ಲಾ ಮಠಾಧೀಶರು ಉಪಸ್ಥಿತರಿದ್ದು, ಕೊರೊನಾ ಸೋಂಕು ಇಳಿಮುಖವಾಗಲೆಂದು ಪ್ರಾರ್ಥಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.