ETV Bharat / state

ನವರಾತ್ರಿ ಸಂಭ್ರಮ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ - ಉಡುಪಿ ಕೃಷ್ಣ ಮಠದಲ್ಲಿ ನವರಾತ್ರಿ ಹಬ್ಬ

ನವರಾತ್ರಿ ಆಚರಣೆ ವೇಳೆ ಉಡುಪಿ ಕೃಷ್ಣನಿಗೆ ದಿನಂಪ್ರತಿ ನಾನಾ ದೇವಿಯರ ಅಲಂಕಾರ ಮಾಡಲಾಗುತ್ತದೆ. ಸ್ವತಃ ಮಠಾಧೀಶರೇ ಈ ಅಲಂಕಾರ ಮಾಡುವುದರಿಂದ ವಿಶೇಷ ಮೆರಗು ಮೂಡುತ್ತದೆ.

udupi-krishna-as-devi-in-her-various-manifestations-during-navratri
ನವರಾತ್ರಿ ಸಂಭ್ರಮ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ
author img

By

Published : Oct 16, 2021, 4:44 AM IST

ಉಡುಪಿ: ಇಲ್ಲಿನ ಕೃಷ್ಣ ದೇವರು ಅಲಂಕಾರ ಪ್ರಿಯ. ಬಹುತೇಕ ದೇವಾಲಯಗಳಲ್ಲಿ ಪ್ರತಿದಿನ ಏಕರೂಪದ ಅಲಂಕಾರ ನಡೆದರೆ, ಉಡುಪಿಯ ಕೃಷ್ಣನಿಗೆ ವೈವಿಧ್ಯಮಯ ಅಲಂಕಾರ ನಡೆಸಲಾಗುತ್ತದೆ. ಅದರಲ್ಲೂ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಉಡುಪಿಯ ಕೃಷ್ಣ ಸ್ತ್ರೀ ರೂಪಿಯಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ.

udupi-krishna-as-devi-in-her-various-manifestations-during-navratri
ವಿಶೇಷ ಅಲಂಕಾರದಲ್ಲಿ ಉಡುಪಿ ಕೃಷ್ಣ

ನವರಾತ್ರಿ ಆಚರಣೆ ವೇಳೆ ಉಡುಪಿ ಕೃಷ್ಣನಿಗೆ ದಿನಂಪ್ರತಿ ನಾನಾ ದೇವಿಯರ ಅಲಂಕಾರ ಮಾಡಲಾಗುತ್ತದೆ. ಸ್ವತಃ ಮಠಾಧೀಶರೇ ಈ ಅಲಂಕಾರ ಮಾಡುವುದರಿಂದ ವಿಶೇಷ ಮೆರಗು ಮೂಡುತ್ತದೆ. ಸದ್ಯ ಅದಮಾರು ಮಠದ ಪರ್ಯಾಯೋತ್ಸವ ನಡೆಯುತ್ತಿದ್ದು, ಈ ಬಾರಿ ನವರಾತ್ರಿಯ 8 ದಿನಗಳ ಕಾಲ, ವಿವಿಧ ದೇವಿಯರ ಅಲಂಕಾರದಿಂದ ಕೃಷ್ಣ ದೇವರನ್ನು ಪೂಜಿಸಲಾಯಿತು.

ಗಜಲಕ್ಷ್ಮೀ, ಮೋಹಿನಿ, ರುಕ್ಮಿಣಿ, ಲಕ್ಷ್ಮಿ, ಚಪ್ಪರ ಮಂಚದಲ್ಲಿ ರುಕ್ಮಿಣಿ, ರುಕ್ಮಿಣಿ ಪ್ರೇಮ, ಮಹಿಷಾಸುರ ಮರ್ಧಿನಿ, ಶಾರದೆ ಹೀಗೆ 8 ಅವತಾರಗಳಲ್ಲಿ ಕಡಗೋಲು ಕೃಷ್ಣ ದೇವರು ಕಂಗೊಳಿಸಿದ. ಇಷ್ಟು ಅಲಂಕಾರದಲ್ಲಿ ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಕೈಚಳಕ ಮನಸೆಳೆದಿದೆ. ಕೇವಲ ನವರಾತ್ರಿ ಮಾತ್ರವಲ್ಲ ವರ್ಷವಿಡಿ ಪ್ರತಿದಿನ ವಿವಿಧ ಅಲಂಕಾರಗಳಿಂದ ಕೃಷ್ಣ ದೇವರನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.