ಉಡುಪಿ: ಕೊಡೇರಿ ದೋಣಿ ದುರಂತದಲ್ಲಿ ಕಾಣಿಯಾದ ನಾಲ್ವರಲ್ಲಿ ಓರ್ವ ಮೀನುಗಾರನ ಶವ ಪತ್ತೆಯಾಗಿದೆ.
ನಾಗ ಯಾನೆ ನಾಗರಾಜ ಖಾರ್ವಿ ಮೃತದೇಹ ಪತ್ತೆಯಾಗಿದೆ. ಭಾನುವಾರ ಮಧ್ಯಾಹ್ನ ಸಮುದ್ರದ ಅಬ್ಬರದ ಅಲೆಗಳಿಂದ ದೋಣಿ ಬಂಡೆಗೆ ಬಡಿದು ದುರಂತ ಸಂಭವಿಸಿತ್ತು.
ಇದನ್ನು ಓದಿ-ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ
ಮೀನುಗಾರಿಕೆಗೆ ತೆರಳಿದ್ದ 11 ಮಂದಿ ಮೀನುಗಾರರ ಪೈಕಿ ನಾಲ್ವರು ಅಲೆಗೆ ಸಿಲುಕಿ ಕಾಣೆಯಾಗಿದ್ದರು. ಇಂದು ಓರ್ವ ಮೀನುಗಾರನ ಶವ ಪತ್ತೆಯಾಗಿದೆ. ಮೂವರ ಶವಕ್ಕಾಗಿ ಶೋಧ ಮುಂದುವರಿದಿದೆ.