ಉಡುಪಿ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ದಾಖಲಾದ ಪ್ರಕರಣಗಳ ಪಾಸಿಟಿವ್ ರೇಟ್ ನೋಡಿದರೆ ಶೇ. 10.50 ಕ್ಕೆ ಏರಿಕೆಯಾಗಿದೆ. ಈ ಹಿಂದೆ ರೋಗ ಲಕ್ಷಣಗಳುಳ್ಳ ಪ್ರಕರಣಗಳ ಸಂಖ್ಯೆ ಕೇವಲ ಶೇ.0.5 ರಷ್ಟು ಇತ್ತು. ಈಗ ಅದು ಶೇ. 25 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಓದಿ : ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್ ಸ್ಪಷ್ಟನೆ
ಉಡುಪಿ ಜಿಲ್ಲೆಯಲ್ಲಿ ಹಾಸಿಗೆಗಳ ಲಭ್ಯತೆಯ ವಿವರ ನೀಡಿದ ಜಿಲ್ಲಾಧಿಕಾರಿ, ಒಟ್ಟು 1,109 ಆಕ್ಸಿಜನ್ ಸಹಿತ ಬೆಡ್ಗಳಿದ್ದು, ಈ ಪೈಕಿ 1,060 ಬೆಡ್ಗಳು ಖಾಲಿ ಇವೆ. 146 ಐಸಿಯು ಬೆಡ್ಗಳಲ್ಲಿ ಕೇವಲ 67 ಮಾತ್ರ ಬಾಕಿ ಉಳಿದಿವೆ. ಹೆಚ್ಡಿಯು ಬೆಡ್ಗಳು 74 ಮತ್ತು ವೆಂಟಿಲೇಟರ್ ಅಳವಡಿಸಲಾದ 88 ಬೆಡ್ಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ರೋಗಲಕ್ಷಣ ಕಂಡು ಬಂದ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಕೊಳ್ಳದಿದ್ದರೆ ಮುಂದಿನ ವಾರಗಳಲ್ಲಿ ಬೆಡ್ ಕೊರತೆಯಾಗುವ ಅಪಾಯ ಇದೆ ಎಂದು ಜನತೆಯನ್ನು ಎಚ್ಚರಿಸಿದ್ದಾರೆ.