ಉಡುಪಿ: ಮಾಜಿ ನಕ್ಸಲ ನೀಲಗುಳಿ ಪದ್ಮನಾಭರನ್ನು ಮೂರು ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ಉಡುಪಿ ನ್ಯಾಯಾಲಯ ಆದೇಶಿಸಿದೆ.
ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಗ ಬೋಜಶೆಟ್ಟಿ ಹತ್ಯೆ, ಬೆದರಿಕೆ, ನಕ್ಸಲ್ ಕರಪತ್ರ ಹಂಚಿದ ಮೂರು ಪ್ರಕರಣಗಳಿಂದ ಉಡುಪಿ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ದಿ.ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯವಾಹಿನಿಗೆ ಬಂದಿದ್ದ ನೀಲಗುಳಿ ಪದ್ಮನಾಭ, ದಶಕಗಳ ಕಾಲ ನಕ್ಸಲ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ನೀಲಗುಳಿ ನಿವಾಸಿ ಪದ್ಮನಾಭ ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದರು.