ಉಡುಪಿ: ತಾಲೂಕಿನ ಬಡಗುಬೆಟ್ಟು ಪಂಚಾಯತ್ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಪಾಳುಬಿದ್ದ ದೇಗುಲವೊಂದರ ಪಕ್ಕದಲ್ಲಿ ಪುರಾತನ ಭಗ್ನ ವಿಷ್ಣುಮೂರ್ತಿಯ ಶಿಲ್ಪ ಪತ್ತೆಯಾಗಿದೆ.
ಶಿರ್ವ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದಿಂದ ಅನ್ವೇಷಣೆ ನಡೆಸುವ ವೇಳೆ ಪಾಳು ಬಾವಿಯಲ್ಲಿ ಅಪರೂಪದ ಶಿಲ್ಪ ಕಂಡುಬಂದಿದೆ. ಸುಮಾರು 12ನೇ ಶತಮಾನಕ್ಕೆ ಸೇರಿದ ಶಿಲ್ಪ ಇದು ಎಂದು ಗುರುತಿಸಲಾಗಿದೆ.
ಓದಿ:ದೇವರಿಗೆ ದಾನ ಮಾಡುವಷ್ಟು ‘ಸಿರಿವಂತೆ’ ಈ ಭಿಕ್ಷುಕಿ..!
ಎಡ ಹಿಂಬದಿಯ ಕೈಯಲ್ಲಿ ಶಂಖ ವಿದ್ದು, ಕಿವಿಯಲ್ಲಿ ಮಕರಕುಂಡಲ ವಿದೆ. ಕೊರಳಲ್ಲಿ ಕಂಠಾಭರಣ, ಉಪವೀತ ಉದರಾಭಣ ಹಾಗೂ ಮೊಣಕಾಲಿನವರೆಗೆ ಕೌಸ್ತುಭ ಹಾರವಿದೆ. ಪಾದಗಳು ತುಂಡಾಗಿದ್ದು, ಅದರ ಭಾಗಗಳು ಪಾಳುಬಿದ್ದ ದೇವಾಲಯದ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಪತ್ತೆಯಾಗಿವೆ. ಸುಮಾರು ನಾಲ್ಕು ಅಡಿ ಎತ್ತರದ ಶಿಲ್ಪದ ಶೈಲಿ ಮತ್ತು ಲಕ್ಷಣದ ಆಧಾರದ ಮೇಲೆ ಇದು 800 ವರ್ಷಗಳ ಹಿಂದಿನ ಶಿಲ್ಪ ಎಂದು ಗುರುತಿಸಲಾಗಿದೆ.