ಉಡುಪಿ: ಲವ್ ಜಿಹಾದ್ ಎಂಬ ಕಾರಣಕ್ಕೆ ವಿವಾದ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಯುವ ಜೋಡಿಯನ್ನು ಪೊಲೀಸರು ಭಟ್ಕಳದಲ್ಲಿ ಪತ್ತೆ ಮಾಡಿದ್ದಾರೆ.
ಪೆರ್ಡೂರಿನ ಅಪ್ರಾಪ್ತ ಬಾಲಕಿ, ಅಪ್ರಾಪ್ತ ವಯಸ್ಕನೊಂದಿಗೆ ನಾಪತ್ತೆಯಾಗಿದ್ದಳು. ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಹತ್ತು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಯುವಕ ಅನ್ಯಕೋಮಿನವನಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಅ.31 ಕ್ಕೆ ಹಿಂದೂ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದವು. ಪೊಲೀಸರು ಭಟ್ಕಳದಲ್ಲಿ ಅಪ್ರಾಪ್ತ ಜೋಡಿಯನ್ನು ಪತ್ತೆ ಮಾಡಿದ್ದಾರೆ.
ಆರೋಪಿ ಬಾಲಕನ ವಿರುದ್ದ ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಪೋಕ್ಸೋ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿಬಂದಿದೆ.