ETV Bharat / state

ಉಡುಪಿ: ಸ್ವಾತಂತ್ರ್ಯೋತ್ಸವದಲ್ಲಿ ಪುಟಾಣಿ ಪೊಲೀಸ್ ಕಲರವ

ಮಯೂರಿ ಎಂಬ ಹೆಸರಿನ ಮೂರು ವರ್ಷದ ಪುಟಾಣಿ ಓಡಾಟ ಸ್ವಾತಂತ್ರ್ಯ ಹಬ್ಬದಲ್ಲಿ ಕಣ್ಮನ ಸೆಳೆಯಿತು. ವೇದಿಕೆ ಬಳಿ ಓಡಾಡಿಕೊಂಡಿದ್ದ ಕಂದಮ್ಮ ಪೊಲೀಸರ ಜೊತೆಗೂಡಿ ಹೆಜ್ಜೆ ಹಾಕಿತು.

Udupi district celebrate 74th Independent day
ಸ್ವಾತಂತ್ರ್ಯೋತ್ಸವದಲ್ಲಿ ಪುಟಾಣಿ ಪೊಲೀಸ್ ಕಲರವ
author img

By

Published : Aug 15, 2020, 11:51 PM IST

ಉಡುಪಿ: ಕೊರೊನಾ ಹಿನ್ನೆಲೆ ಅತ್ಯಂತ ಸರಳವಾಗಿ ಸ್ವಾತಂತ್ರ್ಯೋತ್ಸವ ನೆರವೇರಿಸಲಾಗಿದೆ. ಇಲ್ಲಿನ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾಧಿಕಾರಿ ಜಗದೀಶ್ ಧ್ವಜಾರೋಹಣ ನೆರವೇರಿಸಿದ್ದಾರೆ.

ವಿಶೇಷ ಸಂದರ್ಭವಾಗಿದ್ದರಿಂದ ಜಿಲ್ಲಾಧಿಕಾರಿಯೇ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿತ್ತು. ಹೀಗಿದ್ದರೂ ಸಿಬ್ಬಂದಿಯ ಪಥ ಸಂಚಲನ ಮೆರುಗು ಹೆಚ್ಚಿಸಿತ್ತು.

ಇನ್ನೂ ಈ ವೇಳೆ ಪೊಲೀಸ್ ವಸ್ತ್ರ ಧರಿಸಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದ ಪುಟಾಣಿಯೊಂದು ನೆರೆದಿದ್ದವರ ಗಮನ ಸೆಳೆಯಿತು. ಪೊಲೀಸರಂತೆ ಗಂಭೀರ ನಡೆ ಎಲ್ಲರ ಕೇಂದ್ರಬಿಂದುವಾಗಿತ್ತು.

ಸ್ವಾತಂತ್ರ್ಯೋತ್ಸವದಲ್ಲಿ ಪುಟಾಣಿ ಪೊಲೀಸ್ ಕಲರವ

ಮಯೂರಿ ಎಂಬ ಹೆಸರಿನ ಮೂರು ವರ್ಷದ ಪುಟಾಣಿಯ ಓಡಾಟ ಸ್ವಾತಂತ್ರ್ಯ ಹಬ್ಬಕ್ಕೆ ಮೆರುಗು ನೀಡಿತು. ಜಿಲ್ಲಾಧಿಕಾರಿಯ ಮಗಳು ಹಾಗೂ ಸಂಬಂಧಿಯ ಮಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.