ಉಡುಪಿ: ಕೊರೊನಾ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಉಡುಪಿ ಮೂಲದ 13 ರ ಪೋರನೊಬ್ಬ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿ ಇಡೀ ದೇಶವೇ ಮೆಚ್ಚುವಂತಹ ಕೆಲಸ ಮಾಡಿದ್ದಾನೆ.
ಉಡುಪಿ ಜಿಲ್ಲೆಯ ದೊಂಡೇರಂಗಡಿ ಮೂಲದ ರಿಷಬ್ ಶೆಟ್ಟಿ ಮಾರ್ಷಲ್ ಆರ್ಟ್ಸ್ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಮುಂಬೈನಲ್ಲಿ ನೆಲೆಸಿರುವ ರಿಷಬ್, ತನ್ನ 13ನೇ ವಯಸ್ಸಿಗೆ ಕರಾಟೆಯಲ್ಲಿ 56 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಹೆಬ್ರಿ ತಾಲೂಕಿನ ದೊಂಡೇರಂಗಡಿಯ ವಿಮಲಾ ಮತ್ತು ಅರುಣ್ ಶೆಟ್ಟಿ ದಂಪತಿ ಪುತ್ರನಾಗಿರುವ ರಿಷಬ್ ಶೆಟ್ಟಿ, ಎರಡು ವರ್ಷ ಲಾಕ್ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ದಿನಪೂರ್ತಿ ಕರಾಟೆ ಅಭ್ಯಾಸ ಮಾಡುತ್ತಿದ್ದ. ಮಾರ್ಷಲ್ ಆರ್ಟ್ಸ್ನ ವಿಡಿಯೋಗಳನ್ನು ನೋಡುವುದು ಮತ್ತು ಅದನ್ನು ತಮ್ಮ ಶಿಕ್ಷಕರ ಜೊತೆ ಅಭ್ಯಾಸ ಮಾಡಿ, ಕಠಿಣ ಪರಿಶ್ರಮದಿಂದ ಏಷ್ಯಾ ಬುಕ್ ಆಫ್ ರೆಕಾರ್ಡ್ 2021 ರಲ್ಲಿ ಸಾಧನೆಯನ್ನು ಮಾಡಿದ್ದಾನೆ.
ಇದೀಗ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ಗಳಲ್ಲಿ ಭಾಗವಹಿಸಲು ಪೂರ್ವ ತಯಾರಿ ಮಾಡುತ್ತಿದ್ದಾನೆ. ಮುಂದೆಯೂ ಸಹ ರಿಷಬ್ ಶೆಟ್ಟಿ ಮತ್ತಷ್ಟು ಪದಕಗಳನ್ನು ಬಾಚಿಕೊಳ್ಳಲಿ ಅನ್ನೋದು ನಮ್ಮ ಆಶಯ.