ಉಡುಪಿ: ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದು, ಇಬ್ಬರ ಶವಗಳೂ ಪತ್ತೆಯಾಗಿವೆ. ಮಲ್ಪೆ ಬೀಚ್ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೇ ದುರ್ಘಟನೆ ನಡೆದಿತ್ತು. ಇದೀಗ ಮತ್ತೆ ಅದೇ ಘಟನೆ ಮರುಕಳಿಸಿದೆ.
ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ 68 ವಿದ್ಯಾರ್ಥಿಗಳಲ್ಲಿ ಇಬ್ಬರು ಸೆಲ್ಫಿ ಗೀಳಿಗೆ ಬಲಿಯಾಗಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿ ಸೂಚನೆ ಮೀರಿ ಸೆಲ್ಫಿ ತೆಗೆಯಲು ಹೋದ ಯುವಕರಲ್ಲಿ ಹಾವೇರಿಯ ಸತೀಶ್ ಎಂ. ನಂದಿಹಳ್ಳಿ (21)ಮತ್ತು ಬಾಗಲಕೋಟೆಯ ಸತೀಶ್ ಕಲ್ಯಾಣಿ ಶೆಟ್ಟಿ (21) ನೀರು ಪಾಲಾದ ಯುವಕರು. ಇಬ್ಬರ ಶವ ಮಧ್ಯ ರಾತ್ರಿಯ ಹೊತ್ತಿಗೆ ಪತ್ತೆಯಾಗಿವೆ.
ಲೈಫ್ ಗಾರ್ಡ್ ಸಿಬ್ಬಂದಿ ಮಾತನ್ನು ಮೀರಿ ಮೋಜು ಮಾಡುವ ವಿದ್ಯಾರ್ಥಿಗಳು ತಮ್ಮ ಜೀವಕ್ಕೆ ಕುತ್ತು ತುಂದುಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಈ ಬಗ್ಗೆ ಬಿಗು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಉಡುಪಿ: ಕೇರಳದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು