ಉಡುಪಿ: ಪೊಲೀಸರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ರಚಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ. ಉಡುಪಿಯ ಪೊಲೀಸ್ ಅಧಿಕಾರಿಯೊಬ್ಬರ ಹೆಸರಲ್ಲಿ ಒಂದೇ ವಾರದಲ್ಲಿ ಎರಡೆರಡು ನಕಲಿ ಅಕೌಂಟ್ ತೆರೆದಿರುವುದು ಪತ್ತೆಯಾಗಿದೆ.
4 ದಿನಗಳ ಹಿಂದೆ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಅವರ ಹೆಸರಲ್ಲಿ ‘ಮಂಜುನಾಥ ಸಿಪಿಐ’ ಎಂಬ ಹೆಸರಲ್ಲಿ ಫೇಸ್ಬುಕ್ ಅಕೌಂಟ್ ಓಪನ್ ಆಗಿತ್ತು. ಈ ಅಕೌಂಟ್ ಬಳಸಿಕೊಂಡು ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಮೆಸೇಜ್ಗಳು ರವಾನೆಯಾಗಿತ್ತು.
ಬಳಿಕ ಎಚ್ಚೆತ್ತ ಅಧಿಕಾರಿ ತಕ್ಷಣವೇ ಎಸ್ಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಈ ಅಕೌಂಟ್ ಡಿ ಆ್ಯಕ್ಟೀವ್ ಆಗಿತ್ತು. ಇದೀಗ 2ನೇ ಬಾರಿಗೆ ಇದೇ ಅಧಿಕಾರಿಯ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಅಕೌಂಟ್ ತೆರೆಯಲಾಗಿದೆ.
ಇದರಿಂದ ಕೆಲವು ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇರಿಸಲಾಗಿದೆ. ಪೊಲೀಸರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿರುವ ವ್ಯಕ್ತಿ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.
ಇದನ್ನೂ ಓದಿ: ಕನ್ಯಾಕುಮಾರಿಯಿಂದ ಲಡಾಕ್ಗೆ ಸೈಕಲ್ ಪ್ರಯಾಣ.. ಉಡುಪಿ ತಲುಪಿದ ಯುವಕನ ಉದ್ದೇಶವೇನು?