ETV Bharat / state

ಉಡುಪಿ: ಕಾಪು ಬೀಚ್​ನಲ್ಲಿ ಇಬ್ಬರು ಪ್ರವಾಸಿಗರು ಸಾವು - ಕಾಪು ಬೀಚ್​ನಲ್ಲಿ ಇಬ್ಬರು ಸಾವು

ಪ್ರವಾಸಕ್ಕೆಂದು ಬಂದ ಇಬ್ಬರು ಯುವಕರು ಕಾಪು ಬೀಚ್​ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

two died in Kapu Beach
ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವು
author img

By

Published : Oct 18, 2020, 8:23 PM IST

ಉಡುಪಿ : ಸಮುದ್ರದಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಕಾಪು ಬೀಚ್​ನಲ್ಲಿ ಇಂದು ಸಂಜೆ ನಡೆದಿದೆ.

ಬೆಂಗಳೂರಿನ ಹೇಸರಘಟ್ಟದ ನಿವಾಸಿಗಳಾದ ರೂಪೇಶ್ ( 21) ಕಾರ್ತಿಕ್ (23 ) ಮೃತಪಟ್ಟ ದುರ್ದೈವಿಗಳು. ಮೃತ ಕಾರ್ತಿಕ್, ರೂಪೇಶ್ ಸಹಿತ ಐವರು ಸ್ನೇಹಿತರು ಕಾಪು ಬೀಚ್​ಗೆ ಬಂದಿದ್ದರು. ಇಬ್ಬರು ನೀರಿಗಿಳಿದು ಈಜಾಡುತ್ತಿದ್ದರು, ಈ ವೇಳೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಸಮುದ್ರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರ ಮೃತ ದೇಹಗಳನ್ನು ಸ್ಥಳೀಯ ಮೀನುಗಾರರು ಮೇಲಕ್ಕೆತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.