ಉಡುಪಿ : ಮೈಸೂರಿನಿಂದ ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದಿದ್ದ ಪ್ರವಾಸಿಗರೊಬ್ಬರು ಸಮುದ್ರದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತರನ್ನು ಅಬ್ರಾರ್ ಅಹ್ಮದ್ ಎಂದು ಗುರುತಿಸಲಾಗಿದೆ.
ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದಿದ್ದ ತೌಸಿಫ್ ಹಾಗೂ ಅಬ್ರಾರ್ ಅಹ್ಮದ್ ಈಜಲು ಕಡಲಿಗೆ ಇಳಿದಿದ್ದರು. ಈ ವೇಳೆ, ಅಲೆಯ ರಭಸಕ್ಕೆ ಸಿಲುಕಿದ್ದು, ಕೊಚ್ಚಿಕೊಂಡು ಹೋಗುತ್ತಿದ್ದ ಇಬ್ಬರನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ದಡಕ್ಕೆ ಕರೆತಂದಿದೆ. ಬಳಿಕ ಅಬ್ರಾರ್ ಅಹ್ಮದ್ ಮತ್ತು ತೌಸಿಫ್ನನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಬ್ರಾರ್ ಅಹ್ಮದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಸರಾಕ್ಕೆಂದು ಊರಿಗೆ ವಾಪಸಾಗುವಾಗ ಬೈಕ್ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ