ಉಡುಪಿ: ಟಿಪ್ಪರ್ ಪಲ್ಟಿಯಾಗಿ ನೀರಿನ ಹೊಂಡಕ್ಕೆ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಪಳ್ಳಿ - ನಿಂಜೂರಿನಲ್ಲಿ ನಡೆದಿದೆ.
ಟಿಪ್ಪರ್ ಚಾಲಕ ಕಾರ್ಕಳ ಗಣಿತನಗರದ ನಿವಾಸಿ ಅರುಣ್‌ಕುಮಾರ್ (40)ಹಾಗೂ ಮತ್ತೋರ್ವ ಯುವಕ ಕಿಶೋರ್ (18) ಮೃತಪಟ್ಟವರು. ಮಣ್ಣು ತರಲೆಂದು ತೆರಳಿದಾಗ ನಿಂಜೂರು ಗ್ರಾಮದ ಮದಗ ಎಂಬಲ್ಲಿ ಟಿಪ್ಪರ್ ನಿಯಂತ್ರಣ ತಪ್ಪಿ ನೀರು ತುಂಬಿದ ಹೊಂಡಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಇಬ್ಬರು ಹೊರ ಬರಲಾರದೇ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.