ಉಡುಪಿ : ಇಂದು ಜಿಲ್ಲೆಯಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. 88 ವರ್ಷದ ವೃದ್ಧ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 20 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
ಈಕೆ ಕಾಪು ತಾಲೂಕಿನ ಉದ್ಯಾವರ ನಿವಾಸಿಯಾಗಿದ್ದಾಳೆ. ಗಂಟಲು ದ್ರವದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಕಾರ್ಕಳ ತಾಲೂಕು ಸಾಣೂರಿನ 65 ವರ್ಷದ ರೋಗಿ ಸಾವನ್ನಪ್ಪಿದ್ದು, ಉಸಿರಾಟ, ಲಂಗ್ಸ್ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.