ETV Bharat / state

ಕೊಡಗಿನಲ್ಲಿ ಇಂದು ಮೂರು ಕೊರೊನಾ ಕೇಸ್ ಪತ್ತೆ..!

ಸೋಮವಾರಪೇಟೆ ತಾಲೂಕಿನ ‌ಶಿರಂಗಾಲ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಗ್ರಾಮದ 120 ನಿವಾಸಿಗಳಿಗೆ ಆರೋಗ್ಯ ತಪಾಸಣೆಗೆ ಸೂಚನೆ ನೀಡಲಾಗಿದೆ.

District Collector Anees Kamani Joy
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
author img

By

Published : Jun 22, 2020, 7:51 PM IST

ಕೊಡಗು: ಇಂದು ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮುಂಬೈನಿಂದ ಬಂದಿದ್ದ ಮತ್ತೊಬ್ಬ ಮಹಿಳೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ‌ಮುಂಬೈನಿಂದ ಬಂದಿದ್ದ 32 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದ್ದು, ಈಕೆ ಮಂಡ್ಯದಲ್ಲಿ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಿದ್ದರು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ‌ಶಿರಂಗಾಲ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಗ್ರಾಮದ 120 ನಿವಾಸಿಗಳಿಗೆ ಆರೋಗ್ಯ ತಪಾಸಣೆಗೆ ಸೂಚನೆ ನೀಡಲಾಗಿದೆ. ಗ್ರಾಮಕ್ಕೆ ತೆರಳುವ ರಸ್ತೆಗಳು ಮತ್ತು ಪಕ್ಕದ ಗ್ರಾಮಗಳನ್ನು ಬಂದ್ ಮಾಡಲು ಇಲ್ಲಿನ ತಹಶೀಲ್ದಾರ್ ಗೋವಿಂದರಾಜು ಆದೇಶ ನೀಡಿದ್ದಾರೆ.

ಪ್ರಸ್ತುತ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಶಿರಂಗಾಲ ಗ್ರಾಮದ ಸೋಂಕಿತ ಹಾಗೂ ಆತನ ಕುಟುಂಬದ ನಾಲ್ವರಿಗೆ ಚಿಕಿತ್ಸೆ ನೀಡಲಾಗಿದೆ. ಸೋಂಕಿತ ತನ್ನ ಕುಟುಂಬದ ನಾಲ್ವರನ್ನು ಒಂದೇ ಕಾರಿನಲ್ಲಿ ಕರೆದುಕೊಂಡು ಮಡಿಕೇರಿ ಆಸ್ಪತ್ರೆಗೆ ಬಂದಿದ್ದ ಎನ್ನಲಾಗಿದೆ.

ಸೋಂಕಿತ ತೆರಳಿದ್ದ ಶನಿವಾರಸಂತೆ ಸಮೀಪದ ಖಾಸಗಿ ಕ್ಲಿನಿಕ್‌ ಅನ್ನೂ ಕೂಡ ಬಂದ್ ಮಾಡಲಾಗಿದೆ. ಕಳೆದ ತಿಂಗಳು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಸೇರಿದಂತೆ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಅವರ ವೈದ್ಯಕೀಯ ವರದಿಗಳು ನೆಗೆಟಿವ್ ಬಂದಿದ್ದವು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.