ETV Bharat / state

ಸಣ್ಣ ಕೆಲಸಕ್ಕೂ ಇಲ್ಲಿ ಬರೋಬ್ಬರಿ 40 ಕಿ.ಮೀ ಸಾಗಬೇಕು: ಮೂಲ ಸೌಲಭ್ಯಕ್ಕಾಗಿ ಜನರ ಪರಿ ಪರಿಯ ಮನವಿ

ಸುತ್ತ ಮೂರು ಕಡೆ ಜಲರಾಶಿ ಮಧ್ಯೆ ಈ ಊರು- ಯಾವುದೇ ಸಣ್ಣ ಕೆಲಸವಾಗಬೇಕಾದರೂ ಇಲ್ಲಿ ಬರೋಬ್ಬರಿ 40 ಕಿ.ಮೀ ಸುತ್ತಬೇಕು ಇಲ್ಲಿನ ಜನ- ಮೂಲಭೂತ ಸೌಲಭ್ಯಗಳಿಲ್ಲದೆ ನಲುಗುತ್ತಿದೆ ಉಡುಪಿ ಜಿಲ್ಲೆಯ ಈ ಪುಟ್ಟ ಗ್ರಾಮ

ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಗ್ರಾಮ
author img

By

Published : May 13, 2019, 12:29 PM IST

ಉಡುಪಿ: ಮೂರು ಕಡೆ ಜಲರಾಶಿ ಹೊಂದಿದ ದ್ವೀಪ ಗ್ರಾಮವೊಂದು ಮೂಲ ಸೌಕರ್ಯದ ಕೊರತೆಯಿಂದ ನಲುಗುತ್ತಿದೆ. ಗ್ರಾಮಸ್ಥರು ಅನುಭವಿಸುತ್ತಿರುವ ನಿತ್ಯ ಸಮಸ್ಯೆಗಳ ಕುರಿತ ಚಿತ್ರಣ ಇಲ್ಲಿದೆ ನೋಡಿ...

ಹೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು:

ಹೌದು, ನೋಡುವುದಕ್ಕೆ ನಯನಮನೋಹರ ಪ್ರದೇಶದಂತೆ ಕಾಣುತ್ತಿರುವ ತಾಲೂಕಿನ ಕೋಡಿ ಎಂಬ ಗ್ರಾಮ ಇದೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಕಾರಣ ಇಲ್ಲಿ ಒಂದು ಸಣ್ಣ ದಾಖಲೆ ಪಡೆಯಬೇಕಾದ್ರೂ ಬರೋಬ್ಬರಿ 40 ಕಿ.ಮೀ ಸುತ್ತಿ ಬರಬೇಕು. ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ಗ್ರಾಮಕ್ಕೆ ಸಾಕಷ್ಟು ಪ್ರವಾಸಿಗರು ಬಂದು ಹೋಗುತ್ತಾರೆ. ಹಾಗಾಗಿ ತಾಲೂಕಿನಲ್ಲಿ ಇದೊಂದು ಗಮನ ಸೆಳೆಯುತ್ತಿರುವ ಗ್ರಾಮವಾಗುತ್ತಿದೆ.

ಆದ್ರೆ ಇಲ್ಲಿನ ಜನರು ಮಾತ್ರ ನಿತ್ಯ ಸಮಸ್ಯೆಗಳ ಜೊತೆಗೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ ಅನ್ನೋದು ಬಹಳ ನೋವಿನ ಸಂಗತಿ. ಶೇ.95 ರಷ್ಟು ಬಡವರು ಹಾಗೂ ಮಧ್ಯಮ ವರ್ಗದ ಜನರೇ ತುಂಬಿರುವ ಈ ಗ್ರಾಮದ ಜನರು ಮನೆ ದಾಖಲೆಗೋ, ಆಧಾರ್ ಕಾರ್ಡ್, ಪಡಿತರ ಚೀಟಿ ಹೀಗೆ ಇನ್ಯಾವುದೋ ಒಂದು ಸರ್ಕಾರಿ ಕಚೇರಿ ಕೆಲಸಕ್ಕೆ ಹೋಗಬೇಕಾದ್ರೆ ಹೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಅನ್ನೋ ಹಾಗೇ ಕೇವಲ 3 ಕಿ.ಮೀ ಇದ್ದ ದಾರಿಗಾಗಿ 40ಕಿ.ಮೀ ದೂರ ಸಾಗಬೇಕು.

ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಗ್ರಾಮ

ಕೋಡಿ ಊರಿನ ಜನ ತಮ್ಮ ಗ್ರಾಮ ಪಂಚಾಯತ್ ಮೆಟ್ಟಿಲು ಹತ್ತಬೇಕಾದ್ರೆ ಸಮುದ್ರ ದಾಟಿಯೇ ಹೋಗಬೇಕು. ರಸ್ತೆ ಮೂಲಕ ಹೋದ್ರೆ ಮೂರು ಬಸ್​ ಹತ್ತಿ ಇಳಿದು 40ಕಿ.ಮೀ ಸಾಗಬೇಕು. ಕೋಡಿ ಗ್ರಾಮಸ್ಥರು ತಮ್ಮ ಪಂಚಾಯತ್ ನೋಡಬೇಕಾದ್ರೆ 9 ಪಂಚಾಯತ್​​ಗಳನ್ನು ದಾಟಿ ಹೋಗಬೇಕು. ಸಮುದ್ರ ದಾಟಿ ಹೋಗುವುದಕ್ಕೆ ಇಲ್ಲಿ ಬೋಟ್ ಅನಿವಾರ್ಯ. ಅದ್ರೆ ಗಾಳಿ-ಮಳೆಗಾಲದಲ್ಲಿ ಸಮುದ್ರ ದಾಟಿ ಹೋಗುವುದು ದುಸ್ತರ. ಜಿಲ್ಲಾಡಳಿತ ಸಮುದ್ರ ದಾಟುವುದಕ್ಕೆ ಬಾರ್ಜ್ ವ್ಯವಸ್ಥೆ ಮಾಡಿತ್ತಾದ್ರು ಈಗ ಬಾರ್ಜ್ ಮೂಲೆ ಸೇರಿ ತುಕ್ಕು ಹಿಡಿಯುತ್ತಿದೆ. ಸದ್ಯ ಈ ಊರಿನ ಜನ ಸಣ್ಣ ಸಣ್ಣ ಕೆಲಸಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಲು ತಮ್ಮ ಊರನ್ನು ಪಕ್ಕದ ಯಾವುದಾದರೂ ಒಂದು ಗ್ರಾಮ ಪಂಚಾಯತ್​ಗೆ ಸೇರಿಸಿ ಎನ್ನುತ್ತಿದ್ದಾರೆ ಸ್ಥಳೀಯರು.

Intro:Body:

2 kn_udp_110519_panchayath_paradata_harsha_spl_story (3).mp4   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.