ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತಟದಲ್ಲಿದ್ದ ಹಲವರ ರಕ್ಷಣೆ ಮಾಡಲಾಗಿದೆ.

ಉಡುಪಿಯ ಪೆರಂಪಳ್ಳಿ ಬಲೇಕುದ್ರು ಪರಿಸರದಲ್ಲಿ ಕೃತಕ ನೆರೆ ಆವರಿಸಿದ್ದು, ಹಲವಾರು ಮನೆಗಳು ದಿಗ್ಬಂಧನಕ್ಕೆ ಒಳಗಾಗಿದೆ. ಉಡುಪಿ ತಹಶೀಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ನೆರೆಯಲ್ಲಿ ಸಿಲುಕಿದ್ದ ಕುಟುಂಬವೊಂದನ್ನು ರಕ್ಷಿಸಲಾಗಿದೆ. ದೋಣಿಯ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತಂದ ತಂಡ 82 ವರ್ಷದ ವಯೋವೃದ್ಧೆ ಮತ್ತು 8 ತಿಂಗಳ ಪುಟ್ಟ ಮಗು ಸಹಿತ 6 ಜನರನ್ನು ರಕ್ಷಣೆ ಮಾಡಿದೆ.

ಅಪಾಯದ ಮಟ್ಟ ಮೀರಿ ನುಗ್ಗಿರುವ ಪ್ರವಾಹದ ನೀರಿನಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.