ಉಡುಪಿ: ಕಡಲಿನಲ್ಲಿ ಈಜೋದು ಅಂದ್ರೆ ಅಲೆಗಳ ನಡುವೆ ಯುದ್ಧ ಮಾಡಿ ಗೆದ್ದಂತೆ. ಅಂತದ್ರಲ್ಲಿ ಇಲ್ಲೊಬ್ರು ಕರಾವಳಿಯ 65 ವಯಸ್ಸಿನ ವ್ಯಕ್ತಿ ಪದ್ಮಾಸನ ಭಂಗಿಯಲ್ಲಿ ಅಲೆಗಳ ನಡುವೆ ಗುದ್ದಾಡಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಕಾಲಿಗೆ ಸರಪಳಿ ಸುತ್ತಿ ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜು: ಇತಿಹಾಸ ನಿರ್ಮಿಸಿದ 65ರ ಹರೆಯದ ಗಂಗಾಧರ್! - ಇತಿಹಾಸ ನಿರ್ಮಿಸಿದ 65 ಹರೆಯದ ಗಂಗಾಧರ್
ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಕೇವಲ ಒಂದು ಗಂಟೆ 13 ನಿಮಿಷ, 7 ಸೆಕೆಂಡ್ನಲ್ಲಿ ಬರೋಬ್ಬರಿ 1400 ಮೀಟರ್ ಈಜುವ ಮೂಲಕ 65 ವರ್ಷ ವಯಸ್ಸಿನ ಗಂಗಾಧರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಗಂಗಾಧರ್
ಉಡುಪಿ: ಕಡಲಿನಲ್ಲಿ ಈಜೋದು ಅಂದ್ರೆ ಅಲೆಗಳ ನಡುವೆ ಯುದ್ಧ ಮಾಡಿ ಗೆದ್ದಂತೆ. ಅಂತದ್ರಲ್ಲಿ ಇಲ್ಲೊಬ್ರು ಕರಾವಳಿಯ 65 ವಯಸ್ಸಿನ ವ್ಯಕ್ತಿ ಪದ್ಮಾಸನ ಭಂಗಿಯಲ್ಲಿ ಅಲೆಗಳ ನಡುವೆ ಗುದ್ದಾಡಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಪದ್ಮಾಸನ ಭಂಗಿಯಲ್ಲಿ 800 ಮೀಟರ್ ಈಜಿ ದಾಖಲೆ ಬರೆಯಲು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗಂಗಾಧರ್ ಅವರಿಗೆ ತಿಳಿಸಿತ್ತು. ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಇವರು ಈಜುವಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಖುದ್ದು ವೀಕ್ಷಿಸಿದರು. ಈಜುವಾಗ ಚಿತ್ರೀಕರಣದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈಜುಪಟು ಗಂಗಾಧರ್ ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2009ರಿಂದ 2019ರವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಇವರದು. ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದ ಹಿರಿಮೆ ಸಹ ಇವರದ್ದಾಗಿದೆ.

TAGGED:
ಈಜುಪಟು ಜಿ ಗಂಗಾಧರ್ ದಾಖಲೆ