ಉಡುಪಿ : ಸೈಂಟ್ ಮೆರೀಸ್ ದ್ವೀಪ ಭೂ ಲೋಕದ ಮೇಲಿನ ಸ್ವರ್ಗ ಅಂತಾನೇ ಹೆಸರುವಾಸಿ. ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ದಂಡು ದಂಡಾಗಿ ಬರ್ತಾರೆ. ಸಂಜೆ ನಾಲ್ಕೂವರೆ ಮೇಲೆ ಈ ದ್ವೀಪಕ್ಕೆ ಯಾರ ಪ್ರವೇಶವೂ ಕೂಡಾ ಇರೋದಿಲ್ಲ. ಆದರೆ ನಿನ್ನೆ ಮುಂಜಾನೆ ಒಬ್ಬ ಯುವತಿ ಹಾಗೂ ಮೂವರು ಯುವಕರು ಕಾಣಿಸಿಕೊಂಡಿದ್ದು, ಅಲ್ಲಿನ ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಅನುಮಾನಗೊಂಡ ಮೀನುಗಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಈ ವಿದೇಶಿ ಪ್ರಜೆಗಳನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಗೋವಾದಿಂದ ಮಲ್ಪೆಗೆ ಜಸ್ಟೀನ್, ಶೀಜಾ, ಜೋಸ್ ಹಾಗೂ ಹರೀಶ್ ಎಂಬುವರು ಪ್ರವಾಸ ಬಂದಿದ್ದರು. ಇವರನ್ನು ವಾಪಸ್ ಕರೆತರಬೇಕಾದ ಬೋಟ್ ಅಲ್ಲಿಯೇ ಬಿಟ್ಟು ಬಂದಿದ್ದು, ಅವಾಂತರಕ್ಕೆ ಕಾರಣವಾಗಿತ್ತು. ಇವರನ್ನು ವಾಪಸ್ ಕರೆತರಬೇಕಿದ್ದ ಬೋಟ್ ಅವರನ್ನು ಅಲ್ಲಿಯೇ ಬಿಟ್ಟು ಬಂದಿತ್ತು ಅನ್ನೋದು ಮೇಲ್ನೊಟಕ್ಕೆ ಕಂಡುಬಂದಿದೆ.
ಆದರೆ, ಇವರ ನಡೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ದ್ವೀಪದಲ್ಲಿ ಬಂದರು ಕಚೇರಿಯ ಮೊಬೈಲ್ ಸಂಖ್ಯೆ ನಮೂದಿಸಿದ್ದರೂ ಇವರು ಸಂಪರ್ಕಿಸದೇ ಇದ್ದ ಉದ್ದೇಶವೇನು ಅನ್ನೋದು ತನಿಖೆಯಾಗಬೇಕಿದೆ. ದ್ವೀಪದೊಳಗಿನ ಅನೇಕ ಸ್ವತ್ತುಗಳಿಗೂ ಇವರು ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ದ್ವೀಪ ಪ್ರವೇಶಿಸಿದ ಮತ್ತು ಅಲ್ಲಿಂದ ವಾಪಸ್ ಆದ ಪ್ರವಾಸಿಗರ ಪರಿಶೀಲನೆ ಇನ್ನು ಮುಂದಾದರೂ ಆಗಬೇಕಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.