ETV Bharat / state

ಕೊರೊನಾದಿಂದ ಗುಣಮುಖರಾದ ಪುತ್ತಿಗೆ ಶ್ರೀ... ಅನುಭವ ಹಂಚಿಕೊಂಡ ಸುಗುಣೇಂದ್ರ ಸ್ವಾಮೀಜಿ

ಪ್ರತಿರೋಧಕ ಶಕ್ತಿ ಚೆನ್ನಾಗಿದ್ದರೆ ನಮಗೆ ಯಾವ ರೋಗವೂ ತಟ್ಟುವುದಿಲ್ಲ. ಪ್ರತಿರೋಧಕ ಶಕ್ತಿ ವೃದ್ಧಿಯೊಂದೇ ಎಲ್ಲಾ ಕಾಯಿಲೆಗೂ ಪರಿಹಾರವೆಂದು ಕೊರೊನಾದಿಂದ ಗುಣಮುಖರಾಗಿ ಬಂದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಿವಿಮಾತು ಹೇಳಿದರು.

Sugunendra Theertha Swamiji got cured of corona and returned
ಕೊರೊನಾದಿಂದ ಗುಣಮುಖರಾಗಿ ಬಂದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಿವಿಮಾತು
author img

By

Published : Aug 3, 2020, 8:40 PM IST

ಉಡುಪಿ: ಕೊರೊನಾದಿಂದ ಗುಣಮುಖರಾಗಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೋಂಕಿನಿಂದ ಆತಂಕಕ್ಕೊಳಗಾಗಿರುವ ಜನತೆಗೆ ಕಿವಿಮಾತನ್ನು ಹೇಳಿದ್ದಾರೆ.

ಪ್ರತಿರೋಧಕ ಶಕ್ತಿ ಚೆನ್ನಾಗಿದ್ದರೆ ನಮಗೆ ಯಾವ ರೋಗವೂ ತಟ್ಟುವುದಿಲ್ಲ. ಪ್ರತಿರೋಧ ಶಕ್ತಿಯ ವೃದ್ಧಿಯೊಂದೇ ಎಲ್ಲಾ ಕಾಯಿಲೆಗೂ ಪರಿಹಾರ ಎಂದು ಕೊರೊನಾದಿಂದ ಗುಣಮುಖರಾಗಿ ಬಂದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೊರೊನಾದಿಂದ ಗುಣಮುಖರಾಗಿ ಬಂದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಿವಿಮಾತು

'ಕೊರೊನಾ ಲಕ್ಷಾಂತರ ಜನರಿಗೆ ಬಾಧೆ ಕೊಟ್ಟಿದೆ. ನಾನೂ ಬಾಧೆಗೆ ಒಳಗಾಗಿ ಮಣಿಪಾಲಕ್ಕೆ ದಾಖಲಾದೆ. ಸಮಸ್ಯೆಗೆ ಏನು ಕಾರಣವೆಂದು ಆಲೋಚಿಸಿದೆ. ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಚಿಂತನೆ ಮಾಡಿದೆ. ನನ್ನ ಅನುಭವಕ್ಕೆ ಬಂದ ವಿಚಾರ ಹಂಚಿಕೊಳ್ತೇನೆ. ಲಸಿಕೆ ಅಥವಾ ಔಷಧ ಕಂಡು ಹಿಡಿದರೂ ಕೊರೊನಾ ಸಮಸ್ಯೆ ಪೂರ್ಣ ಬಗೆಹರಿಯಲ್ಲ. ಪ್ರತಿಯೊಬ್ಬರಲ್ಲೂ ಪ್ರತಿರೋಧಕ ಶಕ್ತಿ ಕುಂಠಿತವಾಗಿದೆ. ಕೊರೊನಾ ಮಾತ್ರವಲ್ಲ, ಮುಂದೆ ಇನ್ನೂ ಅನೇಕ ಸಮಸ್ಯೆ ಬರಬಹುದು. ಪ್ರತಿರೋಧಕ ಶಕ್ತಿ ಚೆನ್ನಾಗಿದ್ದರೆ ನಮಗೆ ಯಾವ ರೋಗವೂ ತಟ್ಟುವುದಿಲ್ಲ. ಪ್ರತಿರೋಧಕ ಶಕ್ತಿ ವೃದ್ಧಿಯೊಂದೇ ಎಲ್ಲಾ ಕಾಯಿಲೆಗೂ ಪರಿಹಾರ' ಎಂದಿದ್ದಾರೆ.

ಈ ಕುರಿತು ತಮ್ಮ ಅನುಭವ ಹಂಚಿಕೊಂಡ ಅವರು, ನನಗೆ ಯಾವತ್ತೂ ಬೆಳಗ್ಗೆ ನಾಲ್ಕು ಗಂಟೆಗೆ ಕೆಮ್ಮು ಪ್ರಾರಂಭವಾಗ್ತಿತ್ತು. ರಾತ್ರಿ ಬೇಗ ಮಲಗಿ ಅಂತ ವೈದ್ಯರು ಹೇಳಿದ್ರು, ರಾತ್ರಿ ಎಂಟು ಗಂಟೆಗೆ ಮಲಗಲು ಪ್ರಾರಂಭಿಸಿದಾಗ ಸಮಸ್ಯೆ ಪರಿಹಾರವಾಯ್ತು. ಆಸ್ಪತ್ರೆಯಲ್ಲಿದ್ದಾಗ ಬೇಗ ಮಲಗಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡೆ. ನಮ್ಮ ಸನಾತನ ಜೀವನ ಪದ್ಧತಿ, ಭಗವದ್ಗೀತೆಯೂ ಅದನ್ನೇ ಹೇಳಿದೆ. ಆರೋಗ್ಯದ ಬಗ್ಗೆ ಕೃಷ್ಣನೂ ಅದೇ ಸೂಚನೆ ನೀಡಿದ್ದಾನೆ. ಸಕಾಲಕ್ಕೆ ಆಹಾರ, ನಿದ್ರೆ ಮಾಡಿದರೆ ಯಾವ ರೋಗವೂ ಬರುವುದಿಲ್ಲ. ಸೂರ್ಯಾಸ್ಥದ ಮೊದಲು ಆಹಾರ, ಸೋರ್ಯಾಸ್ಥದ ಎರಡು ಗಂಟೆಯಲ್ಲಿ ನಿದ್ರೆ ಮಾಡಬೇಕು. ಇದರಿಂದ ಪ್ರತಿರೋಧಕ ಶಕ್ತಿ ಜಾಗೃತವಾಗುತ್ತೆ. ಇದನ್ನು ನಾನು ನನ್ನ ಅನುಭವದಲ್ಲಿ ಕಂಡುಕೊಂಡಿದ್ದೇನೆ ಎಂದು ಸ್ವಾಮೀಜಿ ಹೇಳಿದರು.

12 ನೇ ವರ್ಷದಲ್ಲಿ ಸನ್ಯಾಸ ಸ್ವೀಕರಿಸಿದೆ. ಬಿಡುವಿಲ್ಲದ ದಿನಚರಿಯಲ್ಲಿ ಶುದ್ಧ ಆಹಾರ ಸ್ವೀಕರಿಸಿದರೂ ಆರೋಗ್ಯದ ಸಮಸ್ಯೆ ಬರಲು ಕಾರಣ ಏನು ಅಂತ ಆಲೋಚಿಸಿದೆ. ಸಕಾಲದಲ್ಲಿ ಆಹಾರ, ನಿದ್ರೆ ಮಾಡದೇ ಇರವುದೇ ಕೊರೊನಾ ಬರಲು ಕಾರಣವಾಯ್ತು. ನಿರೋಧಕ ಶಕ್ತಿ ಇಲ್ಲವಾದ್ರೆ ಎಷ್ಟೇ ಸಾತ್ವಿಕ ಆಹಾರ ಸ್ವೀಕರಿಸಿರೋ ಆರೋಗ್ಯ ಹಿಡಿತಕ್ಕ ಬರುವುದಿಲ್ಲ. ಚೀನಾ ದೇಶ ಪಾಕಿಸ್ತಾನದೊಂದಿಗೆ ಸೇರಿ ನಮ್ಮ ದೇಶದ ಮೇಲೆ ಜೈವಿಕ ಅಸ್ತ್ರ ಪ್ರಯೋಗ ಮಾಡುತ್ತಿದೆ ಎನ್ನಲಾಗುತ್ತಿದೆ. ವಿವಿಧ ಜೈವಿಕ ಅಸ್ತ್ರ ಪ್ರಯೋಗಕ್ಕೆ ಪ್ರತಿರೋಧಕ ಶಕ್ತಿಯೇ ಉತ್ತರ. ದೇಶ ಮತ್ತು ಸೈನ್ಯದ ಹಿತದೃಷ್ಟಿಯಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿಟ್ಟುಕೊಳ್ಳಬೇಕು ಎಂದು ಪುತ್ತಿಗೆ ಶ್ರೀಗಳು ಸಲಹೆ ನೀಡಿದರು.

ಅಧುನಿಕ ಜೀವನ ಶೈಲಿಯಿಂದಲೇ ಸಮಸ್ಯೆ ಉಂಟಾಗುತ್ತಿದೆ ಎಂದ ಶ್ರೀಗಳು, ಆರೋಗ್ಯಕ್ಕೆ ಹಾನಿಯಾಗುತ್ತಿರುವುದರಿಂದ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕಚೇರಿಗಳು ಬೆಳಗ್ಗೆ ಆರೇಳು ಗಂಟೆಗೆ ಆರಂಭವಾಗಿ ಮಧ್ಯಾಹ್ನ ಮೂರು ನಾಲ್ಕು ಗಂಟೆಗೆ ಮುಗಿದರೆ ಜನರಿಗೂ ಅನುಕೂಲವಾಗುತ್ತದೆ. ಸೂರ್ಯಾಸ್ಥದ ವೇಳೆಗೆ ಆಹಾರ ಸ್ವೀಕರಿಸಿ ಎಂಟು ಗಂಟೆಯ ನಂತ್ರ ವಿಶ್ರಾಂತಿ ಪಡೆಯಬೇಕು. ಅಂಗಡಿ ಮಳಿಗೆಗಳು ಎಂಟು ಗಂಟೆಗೆ ಮುಚ್ಚಬೇಕು. ಕಾನೂನಿನ ಮುಖಾಂತರ ಈ ಕೆಲಸ ಮಾಡಬೇಕು. ರಾತ್ರಿ ಎಂಟರಿಂದ ಬೆಳಗ್ಗೆ ನಾಲ್ಕರವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯ ಘೋಷಿಸಬೇಕು. ಲಾಕ್ ಡೌನ್ ಥರ ಕಟ್ಟುನಿಟ್ಟಿನ ನಿಯಮ ಬರಲಿ. ಕೊರೊನಾದಂತಹ ಭವಿಷ್ಯದ ಸಮಸ್ಯೆಗಳನ್ನು ಎದುರಿಸಬೇಕು ಅಂದ್ರೆ ಈ ಕೆಲಸ ಆಗಬೇಕು. ಮಕ್ಕಳಿಗೆ ಬಾಲ್ಯದಿಂದಲೇ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಕ್ರಮ ಅಭ್ಯಾಸವಾಗಲಿ. ಮೋದಿಯವರು ಈ ಬಗ್ಗೆ ವಿಶೇಷ ಗಮನಹರಿಸಿ ಎಂದು ಸ್ವಾಮೀಜಿ ಮನವಿ ಮಾಡಿದರು.

ಅಮೆರಿಕದಲ್ಲಿ ಶತಾಯುಷಿಗಳ ಸಂಖ್ಯೆ ಜಾಸ್ತಿಯಾಗಿದೆ. ಕಾರಣ ಏನಂದ್ರೆ ಸೂರ್ಯಾಸ್ತಕ್ಕೆ ಮೊದಲೇ ಅವರು ಆಹಾರ ಸ್ವೀಕರಿಸುತ್ತಾರೆ. ಸೂರ್ಯಾಸ್ಥದ ನಂತರ ಆಹಾರ ಇಲ್ಲ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡೋಣ, ಇದರಿಂದ ಹೆಚ್ಚು ಹುರುಪು ಚೈತನ್ಯ ಪಡೆಯಲು ಸಾಧ್ಯ. ಇದು ನನ್ನ ಅನುಭವಕ್ಕೂ ಬಂದಿದೆ. ಎಂಟರ ನಂತರ ಟಿವಿ, ಮೊಬೈಲ್ ಬಳಸಲ್ಲ ಅಂದ್ರೆ ಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತೆ. ಈ ಎಲ್ಲಾ ಬದಲಾವಣೆಗೆ ಸರ್ಕಾರಗಳು ಪೂರಕ ಶಾಸನ ತರಲಿ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.