ಉಡುಪಿ : ಮಲ್ಪೆ ಬೀಚ್ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿದ್ದ ತೇಲುವ ಸೇತುವೆ ಉದ್ಘಾಟನೆಗೊಂಡ ಎರಡೇ ದಿನಕ್ಕೆ ಸಮುದ್ರ ಪಾಲಾಗಿದೆ. ಕಿತ್ಕೊಂಡ್ಹೋಗಿರುವ ತೇಲುವ ಸೇತುವೆ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಎಂಬಂತೆ ನಿರ್ಮಾಣವಾಗಿದ್ದ ತೇಲುವ ಸೇತುವೆ ಮಲ್ಪೆ ಬೀಚ್ನ ಪ್ರಮುಖ ಆಕರ್ಷಣೆಯಾಗುವ ಹಂತದಲ್ಲಿತ್ತು. ಸದ್ಯ ಸೇತುವೆಗೆ ಅಳವಡಿಸಲಾದ ತೇಲುವ ಇಂಟರ್ ಲಾಕಿಂಗ್ ಪ್ಲೇಟ್ಗಳು ನಿರಂತರವಾಗಿ ಹೊಡೆಯುವ ಅಲೆಗಳ ರಭಸಕ್ಕೆ ಮುರಿದು ದಡ ಸೇರಿವೆ.
![ಸಮುದ್ರದ ಅಲೆಗಳ ರಭಸಕ್ಕೆ ಕಿತ್ಕೊಂಡು ಹೋದ ರಾಜ್ಯದ ಪ್ರಥಮ ಫ್ಲೋಟಿಂಗ್ ಬ್ರಿಡ್ಜ್](https://etvbharatimages.akamaized.net/etvbharat/prod-images/15235651_defs.jpg)
ಓದಿ: ನೋಡಿ: ಬೈಪೊರೆ ಬೀಚ್ನಲ್ಲಿ ತೇಲುವ ಸೇತುವೆ ನಿರ್ಮಾಣ; ಅಲೆಗಳ ಜೊತೆ ಪ್ರವಾಸಿಗರ ಪಯಣ
ಸಮುದ್ರದ ತೆರೆಗಳ ಮೇಲೆ ತೇಲಿ ಸಾಗುವ ಹಾಗಿದ್ದ ಸೇತುವೆ ಅಲೆಗಳ ರಭಸ ತಡೆದುಕೊಳ್ಳಲಾಗದೆ ಮುರಿದು ಹೋಗಿದೆ. ಕಳೆದ ಶುಕ್ರವಾರವಷ್ಟೇ ಮಲ್ಪೆ ಬೀಚ್ನಲ್ಲಿ ನಿರ್ಮಾಣವಾಗಿದ್ದ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದ್ದರು. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದೆ.
![ಸಮುದ್ರದ ಅಲೆಗಳ ರಭಸಕ್ಕೆ ಕಿತ್ಕೊಂಡು ಹೋದ ರಾಜ್ಯದ ಪ್ರಥಮ ಫ್ಲೋಟಿಂಗ್ ಬ್ರಿಡ್ಜ್](https://etvbharatimages.akamaized.net/etvbharat/prod-images/15235651_sfesdf.jpg)
ಕರ್ನಾಟಕವನ್ನು ಹೊರತುಪಡಿಸಿದರೆ ಕೇರಳ ರಾಜ್ಯದ ಬೇಫೂರ್ ಬೀಚಿನಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಿಸಲಾಗಿತ್ತು. ಸದ್ಯ ಸೇತುವೆಯ ದುರಸ್ತಿ ಕಾರ್ಯವು ಕೂಡ ನಡೆಯುತ್ತಿದೆ. ಶೀಘ್ರದಲ್ಲೇ ಪ್ರವಾಸಿಗರ ಬಳಕೆಗೆ ತೇಲುವ ಸೇತುವೆ ಲಭ್ಯವಾಗಲಿದೆ ಎನ್ನಲಾಗ್ತಿದೆ.
-
ಉಡುಪಿಯ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಧಾರ್ಮಿಕ ನಗರಿ ಈಗ ಪ್ರವಾಸೋದ್ಯಮದಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕದ ಪ್ರಥಮ ತೇಲುವ ಸೇತುವೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಪ್ರವಾಸಿಗರ ಬಳಕೆಗೆ ತೆರೆದುಕೊಂಡಿದೆ. pic.twitter.com/4XeM4Mv1n1
— Raghupathi Bhat (@RaghupathiBhat) May 7, 2022 " class="align-text-top noRightClick twitterSection" data="
">ಉಡುಪಿಯ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಧಾರ್ಮಿಕ ನಗರಿ ಈಗ ಪ್ರವಾಸೋದ್ಯಮದಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕದ ಪ್ರಥಮ ತೇಲುವ ಸೇತುವೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಪ್ರವಾಸಿಗರ ಬಳಕೆಗೆ ತೆರೆದುಕೊಂಡಿದೆ. pic.twitter.com/4XeM4Mv1n1
— Raghupathi Bhat (@RaghupathiBhat) May 7, 2022ಉಡುಪಿಯ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಧಾರ್ಮಿಕ ನಗರಿ ಈಗ ಪ್ರವಾಸೋದ್ಯಮದಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕದ ಪ್ರಥಮ ತೇಲುವ ಸೇತುವೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಪ್ರವಾಸಿಗರ ಬಳಕೆಗೆ ತೆರೆದುಕೊಂಡಿದೆ. pic.twitter.com/4XeM4Mv1n1
— Raghupathi Bhat (@RaghupathiBhat) May 7, 2022