ಉಡುಪಿ: ಮೀನುಗಾರರ ಹರಿದ ಬಲೆಯ ತುಂಡಿಗೆ ಸಿಲುಕು ದಡ ಸೇರಿದ್ದ ಅಪರೂಪದ ಎರಡು ಕಡಲಾಮೆಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.
ಕೋಟ ಮಣೂರು ಪಡುಕರೆಯ ಮೀನುಗಾರರ ಮನೆಯ ಸಮೀಪ ಕಡಲ ತೀರದಲ್ಲಿ ಕಡಲಾಮೆಗಳು ಪತ್ತೆಯಾಗಿತ್ತು.
ಕಡಲ ತೀರದಲ್ಲಿ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಎರಡು ಕಡಲಾಮೆಯನ್ನು ಗಮನಿಸಿದ ಸ್ಥಳೀಯರು, ಆಮೆಗಳನ್ನು ಬಲೆಯಿಂದ ಬಿಡಿಸಿ ಸುರಕ್ಷಿತವಾಗಿ ಪುನಃ ಕಡಲಿಗೆ ಬೀಡುವ ಕಾರ್ಯ ಮಾಡಿದ್ದಾರೆ.