ಉಡುಪಿ: ಕುಂದಾಪುರ ತಾಲೂಕಿನ ಕೋಡಿ ಲೈಟ್ ಹೌಸ್ ಬಳಿ ಅಪರೂಪದ ಕಡಲ ಆಮೆಯ ಮೊಟ್ಟೆಗಳು ಪತ್ತೆಯಾಗಿವೆ.
ಒಂದೇ ಸ್ಥಳದಲ್ಲಿ 100ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿವೆ. ಕಡಲ ಆಮೆಗಳ ಸಂರಕ್ಷಣೆಗೆ ಅನೇಕ ಪ್ರಯತ್ನಗಳು ನಡೆಯುತ್ತಿರುವಾಗಲೇ ನೂರಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿರುವುದು ಗಮನ ಸೆಳೆದಿದೆ.
ಪತ್ತೆಯಾಗಿರುವ ಮೊಟ್ಟೆಗಳು ಅಪರೂಪದ ಆಲಿವ್ ರಿಡ್ಲೆ ಜಾತಿಗೆ ಸೇರಿದ ಕಡಲ ಆಮೆಯದ್ದಾಗಿವೆ. ಈ ಅಪರೂಪದ ಮೊಟ್ಟೆಗಳನ್ನು ಸಂರಕ್ಷಿಸಲು ಕ್ರಮಕೈಗೊಳ್ಳಲಾಗಿದೆ.