ಬೆಂಗಳೂರು/ಉಡುಪಿ: ಹಿಜಾಬ್-ಕೇಸರಿ ಶಾಲು ವಿವಾದದ ನಡುವೆ ರಾಜ್ಯದಲ್ಲಿ ಇಂದಿನಿಂದ 9 ಮತ್ತು 10ನೇ ತರಗತಿ ಆರಂಭವಾಗಿವೆ. ಹಿಂದಿನಂತೆಯೇ ವಿದ್ಯಾರ್ಥಿಗಳು ಶಾಲೆಗಳತ್ತ ಆಗಮಿಸುತ್ತಿದ್ದಾರೆ. ಶಾಲೆಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದ್ದು, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಹಿಜಾಬ್-ಕೇಸರಿ ಶಾಲು ವಿವಾದವು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಹೈಸ್ಕೂಲು-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 1-8ನೇ ತರಗತಿಗಳು ಎಂದಿನಂತೆ ನಡೆಯುತ್ತಿದ್ದವು. ಬಳಿಕ ಹಿಜಾಬ್ ವಿವಾದದ ಕುರಿತಂತೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಶಾಲೆ ಆರಂಭಿಸುವಂತೆ ತಿಳಿಸಿತ್ತು.
-
Karnataka: Schools for classes up to std 10th reopen today after they were closed in wake of #Hijab row.
— ANI (@ANI) February 14, 2022 " class="align-text-top noRightClick twitterSection" data="
Visuals from Government High School in Udupi. pic.twitter.com/xGoCHDq7mj
">Karnataka: Schools for classes up to std 10th reopen today after they were closed in wake of #Hijab row.
— ANI (@ANI) February 14, 2022
Visuals from Government High School in Udupi. pic.twitter.com/xGoCHDq7mjKarnataka: Schools for classes up to std 10th reopen today after they were closed in wake of #Hijab row.
— ANI (@ANI) February 14, 2022
Visuals from Government High School in Udupi. pic.twitter.com/xGoCHDq7mj
ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ಫೆಬ್ರವರಿ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಪ್ರೌಢಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸೆಕ್ಷನ್ 144 ಸೆಕ್ಷನ್ ಜಾರಿಯಲ್ಲಿದೆ.
ಬೆಂಗಳೂರಿನಲ್ಲೂ ಶಾಲೆ ಆರಂಭ: ನಗರದಲ್ಲೂ ಶಾಲೆಗಳು ಎಂದಿನಂತೆ ಆರಂಭಗೊಂಡಿವೆ. ಕಳೆದ 2 ದಿನಗಳ ಹಿಂದೆ ಶಿಕ್ಷಕಿ ಶಶಿಕಲಾ ಬೋರ್ಡ್ ಮೇಲೆ ಅವಮಾನಕರವಾಗಿ ಬರೆದಿದ್ದಾರೆ ಎಂದು ಆರೋಪಿಸಿ ನಗರದ ಚಂದ್ರಲೇಔಟ್ ಗಂಗಗೊಂಡನಹಳ್ಳಿಯಲ್ಲಿನ ವಿದ್ಯಾಸಾಗರ ಶಾಲೆಯಲ್ಲಿ ಪೋಷಕರು ಗಲಾಟೆ ನಡೆದಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಸೂಚನೆ ಮೇರೆಗೆ ಎಸಿ ಶಿವಣ್ಣ ಕೂಡ ತರಗತಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು
ಬಳಿಕ ಮಾತನಾಡಿದ ಎಸಿ ಶಿವಣ್ಣ, ನಗರದ ಶಾಲೆಗಳ ಪರಿಶೀಲನೆ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಶಾಲೆಯಲ್ಲಿ ಯಾವುದೇ ತೊಂದರೆ ಇಲ್ಲ. ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಶಾಲೆಯ ಗಲಾಟೆ ಬಗ್ಗೆ ಯಾವುದೇ ವಿಷಯ ಚರ್ಚೆ ಆಗಿಲ್ಲ. ಡಿಸಿ ಆದೇಶದಂತೆ ನಗರದ ಶಾಲೆಗಳನ್ನು ಪರಿಶೀಲಿಸುತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಬೋರ್ಡ್ ಮೇಲೆ ಅವಮಾನಕರ ಬರಹ ಆರೋಪ : ಬೆಂಗಳೂರಿನಲ್ಲಿ ಶಾಲಾ ಶಿಕ್ಷಕಿ ವಜಾ
ಶಿಕ್ಷಕಿ ಶಶಿಕಲಾಗೆ ಒಂದು ವಾರ ರಜೆ: ವಿದ್ಯಾ ಸಾಗರ ಶಾಲೆಯ ಪ್ರಿನ್ಸಿಪಾಲ್ ಶಿವಕುಮಾರ್ ಮಾಹಿತಿ ನೀಡಿ, ಇಂದಿನಿಂದ ಶಾಲೆ ಆರಂಭ ಆಗಿದೆ. ಎಲ್ಲಾ ಮಕ್ಕಳು ಬಂದಿದ್ದು, ಪೋಷಕರು ಸಹಕಾರ ನೀಡುತ್ತಿದ್ದಾರೆ. ಯಾರೂ ಕೂಡ ಗಲಾಟೆ ಮಾಡಿಲ್ಲ. ಮಕ್ಕಳೇ ಸ್ವಯಂಪ್ರೇರಿತವಾಗಿ ಹಿಜಾಬ್ ಅನ್ನು ವಿಶೇಷ ಕೊಠಡಿಯಲ್ಲಿ ತೆಗೆಯುತ್ತಾರೆ. ಈ ಹಿಂದೆ ಮಕ್ಕಳು ಬುರ್ಖಾ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದರು. ವಿಶೇಷ ಕೊಠಡಿಯಲ್ಲಿ ಬುರ್ಖಾ, ಹಿಜಾಬ್, ಸ್ಕಾರ್ಫ್ ತೆಗೆಯುತ್ತಿದ್ದರು. ಶಾಲೆ ಬಿಡುವಾಗ ಮತ್ತೆ ಧರಿಸಿ ಹೋಗುತ್ತಿದ್ದರು. ಈಗ ಕೂಡ ಅದೇ ನಿಯಮ ಪಾಲನೆಯಾಗುತ್ತಿದೆ. ಸಭೆ ಬಗ್ಗೆ ಇನ್ನೂ ಕೂಡ ನಿಗದಿಯಾಗಿಲ್ಲ, ಹಾಗೆಯೇ ಶಿಕ್ಷಕಿ ಶಶಿಕಲಾಗೆ ಒಂದು ವಾರ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.