ಉಡುಪಿ : ಜೋಕಾಲಿ ಆಡುತ್ತಿದ್ದಾಗ ಸಂದರ್ಭದಲ್ಲಿ ಬಾಲಕಿಯ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ತಾಲೂಕು ನಿಟ್ಟೆ ಗ್ರಾಮ ಕೆಮ್ಮಣ್ಣುವಿನ ಲಕ್ಷ್ಮಿ ಪೂಜಾರಿ ಎಂಬವರ ಪುತ್ರಿ ಮಾನ್ವಿ (9) ಮೃತ ಬಾಲಕಿ ಎಂದು ತಿಳಿದು ಬಂದಿದೆ. ಪಕ್ಕದ ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ : ಫ್ಲೈಓವರ್ ಮೇಲಿಂದ ಬಿದ್ದು ವ್ಯಕ್ತಿ ಸಾವು ಶಂಕೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಸಮೀಪದ ಮನೆಯ ಮತ್ತೊಬ್ಬ ಬಾಲಕಿಯ ಜೊತೆ ಸೀರೆಯಲ್ಲಿ ಜೋಕಾಲಿ ಕಟ್ಟಿ ಆಡುತ್ತಿದ್ದರು. ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಸ್ಥಳದಲ್ಲಿದ್ದವರು ತಕ್ಷಣ ಬಾಲಕಿಯನ್ನು ನಿಟ್ಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದಿದೊಯ್ದು ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಬಾಲಕಿ ಮಾನ್ವಿ ಮೃತಪಟ್ಟಿದ್ದಳು. ಮತ್ತೊದೆಡೆ ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಸತ್ತು ಗೃಹಣಿ ಆತ್ಮಹತ್ಯೆ : ನಿನ್ನೆ (ಭಾನುವಾರ) ಗಂಡ ಮತ್ತು ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ (27) ಮೃತ ದುರ್ದೈವಿ. ಆಕಲ ಗ್ರಾಮದಿಂದ ದೇವರಮ್ಮನಹಳ್ಳಿ ಗ್ರಾಮದ ಜಗದೀಶ್ (30) ಎಂಬ ವ್ಯಕ್ತಿಗೆ ಕಳೆದ ಐದು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ಇದನ್ನೂ ಓದಿ : ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ಆರು ಜನರ ಸಾವು.. ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದ್ದು, ಶನಿವಾರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಬಳಿಕ ಗಂಡ ಹೆಂಡತಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಗೃಹಿಣಿ ಬೇಸತ್ತು ಪತಿ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಭಾನುವಾರ ತಮ್ಮ ಸ್ವಂತ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಹಾಗು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶಿವನಂಜ ಶೆಟ್ಟಿ ಅವರು ಪರಿಶೀಲನೆ ನಡೆಸಿದ್ದು, ಹಲವಾರು ದಿನಗಳಿಂದ ಆಗಾಗ್ಗೆ ಗಂಡ ಹೆಂಡತಿ ನಡುವೆ ಗಲಾಟೆಗಳು ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂ. ಮೌಲ್ಯದ ಕೊಕೇನ್ ವಶ : ಲೈಬೀರಿಯನ್ ಮಹಿಳೆ ಬಂಧನ