ಉಡುಪಿ : ನಾಗರ ಪಂಚಮಿ ಶುಭ ಸಂದರ್ಭದಲ್ಲಿ ಖ್ಯಾತ ಕಲಾವಿದ ಹರೀಶ್ ಸಾಗ, ಮರಳಿನ ಮೇಲೆ ಚಿತ್ತಾರ ಬಿಡಿಸಿ ಶುಭ ಕೋರಿದ್ದಾರೆ.
ಪ್ರತಿ ಶ್ರಾವಣ ಮಾಸದಂದು ಬರುವ ಮೊದಲ ಹಬ್ಬ ನಾಗರಪಂಚಮಿ. ಪರಶುರಾಮನ ಸೃಷ್ಟಿಯ ಕರಾವಳಿ ಭಾಗದಲ್ಲಿ ನಾಗನನ್ನು ಪ್ರತ್ಯಕ್ಷ ದೇವರನ್ನಾಗಿ, ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಭಯ, ಭಕ್ತಿ ಹಾಗೂ ಶ್ರದ್ಧೆಯಿಂದ ಕುಟುಂಬ ಸಮೇತರಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ.
ಈ ಬಾರಿ ಕೊರೊನಾ ಕಾರಣದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನವನ್ನ ಸರಿದೂಗಿಸುವಂತೆ ಸಮಸ್ತ ಜನತೆಯ ಪರವಾಗಿ ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ ಹಾಗೂ ರಾಘವೇಂದ್ರ, ಕೋಟೇಶ್ವರದ ಕೋಡಿ ಬೀಚ್ನಲ್ಲಿ ಕೊರೊನಾ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ಕಲಾಕೃತಿ ರಚಿಸಿದ್ದಾರೆ.