ETV Bharat / state

ತಾಯಿ-ಮಗನ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಸಾರ್ವಜನಿಕರಿಂದ ಕಾಲ್ನಡಿಗೆ ಜಾಥಾ

author img

By

Published : Feb 3, 2021, 5:34 PM IST

ಅಮಾಯಕ ತಾಯಿ-ಮಗನ ಮೇಲೆ ಹಲ್ಲೆ ನಡೆಸಿದ ಪೊಲೀಸ್​ ಅಧಿಕಾರಿಗಳನ್ನು ಒಂದು ವಾರದೊಳಗೆ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಉಡುಪಿ ಜಿಲ್ಲೆಯ ಕೋಟಾದಲ್ಲಿ ಸಾರ್ವಜನಿಕರು ಕಾಲ್ನಡಿಗೆ ಪ್ರತಿಭಟನೆ ನಡೆಸಿದ್ದಾರೆ.

publics-protests-against-police-harassment
ತಾಯಿ-ಮಗನ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಸಾರ್ವಜನಿಕರಿಂದ ಕಾಲ್ನಡಿಗೆ ಪ್ರತಿಭಟನೆ

ಉಡುಪಿ: ತಾಯಿ-ಮಗನ ಮೇಲೆ ಕೋಟ ಠಾಣೆಯ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಕಾಲ್ನಡಿಗೆ ಜಾಥಾ ನಡೆಸಿದರು.

ಬೈಕ್​ನಲ್ಲಿ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಪ್ರಶಾಂತ್ ಎಂಬಾತನ ಮೇಲೆ ಕೋಟ ಠಾಣೆಯ ಪೊಲೀಸರು ವಾಹನ ತಪಾಸಣೆಯ ನೆಪದಲ್ಲಿ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ ಮಗನ ರಕ್ಷಣೆಗೆ ನಿಂತ ತಾಯಿಯ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಸಾಲಿಗ್ರಾಮದಿಂದ ಕೋಟ ಹೈಸ್ಕೂಲ್​​ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಓದಿ: ವಂಚಕ ಯುವರಾಜ್ ಜೊತೆ ಹಣದ ವ್ಯವಹಾರ: ರಾಧಿಕಾ ಕುಮಾರಸ್ವಾಮಿಗೆ ಮತ್ತೆ ಎದುರಾಗುತ್ತಾ ಸಂಕಷ್ಟ?

ಪೊಲೀಸ್ ಇಲಾಖೆ ಇರುವುದು ಜನರ ಸೇತುವೆಯಾಗಿ ಕಾರ್ಯನಿರ್ವಹಿಸುವುದಕ್ಕಾಗಿಯೇ ವಿನಾ ಮನಬಂದಂತೆ ಕಾರ್ಯನಿರ್ವಹಿಸುವುದಕ್ಕೆ ಅಲ್ಲ. ಅಮಾಯಕ ತಾಯಿ-ಮಗನ ಮೇಲೆ ಹಲ್ಲೆ ನಡೆಸಿದ ಪೊಲೀಸ್​ ಅಧಿಕಾರಿಗಳನ್ನು ಒಂದು ವಾರದೊಳಗೆ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಠಾಣೆ ಎದುರು ಅಮರಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.