ETV Bharat / state

'ನಿಮ್ಮ ಮಗನನ್ನು ಸಹ ಟೆರರಿಸ್ಟ್ ಎಂದು ಕರೆಯುತ್ತೀರಾ'..? ಮಾಹೆ ವಿವಿ ಪ್ರೊಫೆಸರ್​ಗೆ ಚಳಿ ಬಿಡಿಸಿದ ವಿದ್ಯಾರ್ಥಿ - ಮಾಹೆ ವಿಶ್ವವಿದ್ಯಾಲಯದ ಎಂಐಟಿ ವಿಭಾಗ

ತರಗತಿಯಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ವಿಡಿಯೋ ವೈರಲ್ ಆಗಿದೆ.

professor-allegedly-calls-student-terrorist-in-classroom
ವಿದ್ಯಾರ್ಥಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪ: ವಿವಿ ಪ್ರಾಧ್ಯಾಪಕ ಅಮಾನತು
author img

By

Published : Nov 28, 2022, 7:33 PM IST

Updated : Nov 28, 2022, 8:22 PM IST

ಉಡುಪಿ: ಮಣಿಪಾಲ ಮಾಹೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ವಿಡಿಯೋವೊಂದು ವೈರಲ್ ಆಗಿದೆ. ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ಘಟನೆ ನಡೆದಿದೆ ಎನ್ನಲಾದ ವಿಡಿಯೋ ಟ್ವಿಟರ್​​ನಲ್ಲಿ ವೈರಲ್ ಆಗಿದ್ದು, ಈ ಸಂಬಂಧ ವಿವಿ ಆಡಳಿತ ಮಂಡಳಿಯು ಆರೋಪಿ ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.

ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಓರ್ವ ವಿದ್ಯಾರ್ಥಿಗೆ ಟೆರರಿಸ್ಟ್​ ಎಂಬ ಅರ್ಥದಲ್ಲಿ ಪ್ರೊಫೆಸರ್ ಮಾತನಾಡಿದ್ದಾರೆ ಹಾಗೂ ಈ ಘಟನೆ ನವೆಂಬರ್ 26ರಂದು ನಡೆದಿದೆ ಎನ್ನಲಾಗ್ತಿದೆ. ಈ ಮಾತಿಗೆ ತರಗತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ 'ನನ್ನನ್ನು ಟೆರರಿಸ್ಟ್ ಎಂದು ಕರೆಯಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅನಗತ್ಯವಾಗಿ ತಮಾಷೆಯಲ್ಲಿ ಈ ರೀತಿ ಮಾತನಾಡಬೇಡಿ. ಅಲ್ಲದೆ, ತಮಾಷೆಯಾಗಿ ನಿಮ್ಮ ಮಗನನ್ನು ಹೀಗೆ ಕರೆಯುತ್ತೀರಾ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ಆಗ ಪ್ರೊಫೆಸರ್ ಸ್ಥಳದಲ್ಲೇ ಕ್ಷಮೆ ಕೇಳಿದ್ದಾರೆ. ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ, ಎಂದು ವಿದ್ಯಾರ್ಥಿ ಆಕ್ಷೇಪ ಎತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  • A Professor in a class room in India calling a Muslim student ‘terrorist’ - This is what it has been to be a minority in India! pic.twitter.com/EjE7uFbsSi

    — Ashok Swain (@ashoswai) November 27, 2022 " class="align-text-top noRightClick twitterSection" data=" ">

ವಿವಿಯಿಂದ ಸೂಕ್ತ ಕ್ರಮ.. ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿರುವ ಮಾಹೆ ವಿವಿ, ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದೆ.

ಘಟನೆಯ ವಿಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ಮಾಹೆ ವಿವಿ ಆಂತರಿಕ ತನಿಖೆ ನಡೆಸುತ್ತದೆ, ಸದ್ಯ ಪ್ರೊಫೆಸರ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ರೀತಿಯ ಬೆಳವಣಿಗೆಯನ್ನು ನಮ್ಮ ವಿಶ್ವವಿದ್ಯಾಲಯ ಸಹಿಸುವುದಿಲ್ಲ. ಧರ್ಮ, ಪಂಥ, ಮತ, ಲಿಂಗಭೇದಕ್ಕೆ ನಮ್ಮ ವಿವಿಯಲ್ಲಿ ಆಸ್ಪದ ಇಲ್ಲ. ಮಾಹೆ ವಿವಿಯ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆ‌‌ ಎಂದು ಮಾಹೆ ವಿಶ್ವವಿದ್ಯಾಲಯದ ಎಂಐಟಿ ವಿಭಾಗ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಶಿವಸೇನೆ ವಕ್ತಾರ ಸಂಜಯ್​ ರಾವತ್​ಗೆ ಬೆಳಗಾವಿ ಕೋರ್ಟ್​ನಿಂದ ಸಮನ್ಸ್

Last Updated : Nov 28, 2022, 8:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.